ಮಂಡ್ಯ: ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹಮದ್ 100 ಪರ್ಸೆಂಟ್ ಇದ್ದಾರೆ, ಅದರಲ್ಲಿ ಸಂಶಯವಿಲ್ಲ. ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಜಮೀರ್ ಅಹಮದ್ರನ್ನು ಅರೆಸ್ಟ್ ಮಾಡ್ತಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ನಟಿ ಸಂಜನಾ ಗಂಡ ಅಜೀಜ್ ಕೂಡ ಡ್ರಗ್ ದಂಧೆಯಲ್ಲಿ ಇದ್ದಾನೆ. ಲವ್ ಜಿಹಾದ್, ಡ್ರಗ್ಸ್ ಎರಡಕ್ಕೂ ನೇರ ಕನೆಕ್ಟ್ ಇದೆ. ದಾವುದ್ ಇಬ್ರಾಹಿಂ ಇದಕ್ಕೆ ಮೂಲ ಪುರುಷ. ಆಜೀಮ್ ಅಸ್ತಾನ ಎಂಬ ದೇಶ ದ್ರೋಹಿ ಇದ್ದ. ಇವರೆಲ್ಲರೂ ಇಡೀ ಚಿತ್ರರಂಗವನ್ನು ಆವರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಡ್ರಗ್ ಮಾಫಿಯಾದಲ್ಲಿ ರಾಜಕೀಯ ಮುಖಂಡರು ಇದ್ದಾರೆ. ಜಮೀರ್ ಚುನಾವಣಾ ಪ್ರಚಾರಕ್ಕೆ ಮುಂಬೈನಿಂದ ಚಿತ್ರ ನಟರನ್ನು ಕರೆಸುತ್ತಾರೆ. ವ್ಯವಸ್ಥಿತ ಜಾಲದಲ್ಲಿ ಜಮೀರ್ ಇರುವುದು ನಿಶ್ಚಿತವಾಗಿದೆ. ಬಿಜೆಪಿಯವರು ಧಮ್ ತೋರಿಸಬೇಕು. ಅವರನ್ನು ಒದ್ದು ಒಳಗೆ ಹಾಕಬೇಕು.
ಪಾದರಾಯನಪುರ, ಡಿಜೆ ಹಳ್ಳಿ ಗಲಾಟೆಗೆ ಡ್ರಗ್ಸ್ ಕಾರಣ. ಸಿಸಿಬಿ ತನಿಖೆ ಬಗ್ಗೆ ನನಗೆ ವಿಶ್ವಾಸ ಇಲ್ಲ. ಈ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುತ್ತದೆ ಎಂದು ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.
`ಅರ್ಚಕರ ಹತ್ಯೆ ಹಿಂದೆ ಜಿಹಾದ್ ಕೆಲಸ ಮಾಡಿರಬಹುದು’
ಮಂಡ್ಯದಲ್ಲಿ ಮೂವರು ಅರ್ಚಕರ ಹತ್ಯೆ ಪ್ರಕರಣದಲ್ಲಿ ಜಿಹಾದ್ ಕೆಲಸ ಮಾಡಿರಬಹುದು. ಮುಜರಾಯಿ ದೇವಸ್ಥಾನಗಳಲ್ಲಿ ಎಲ್ಲಾ ಕಡೆ ಸಿಸಿ ಕ್ಯಾಮೆರಾ ಇವೆ. ಇಲ್ಲಿ ಸಿಸಿ ಕ್ಯಾಮೆರಾ ಕೆಟ್ಟುಹೋಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಸಿಸಿ ಕ್ಯಾಮೆರಾ ಸರಿಪಡಿಸುವಷ್ಟು ಬುದ್ದಿ ಇಲ್ವಾ ಅವರಿಗೆ ? ಮುಜರಾಯಿ ಇಲಾಖೆಯ ಅಧಿಕಾರಿಗಳನ್ನ ತಕ್ಷಣವೇ ಸಸ್ಪೆಂಡ್ ಮಾಡಬೇಕು. ಅಮಾಯಕ ಅರ್ಚಕರ ಹತ್ಯೆ ನಡೆದಿದೆ. ಹುಂಡಿ ಹಣಕ್ಕೋಸ್ಕರ ಹತ್ಯೆ ನಡೆದಿದೆ ಎನ್ನುವುದು ನನಗೆ ಡೌಟ್ ಇದೆ. ಇದರ ಹಿಂದೆ ಇಸ್ಲಾಮಿಕ್, ಜಿಹಾದ್ ಕೆಲಸ ಮಾಡಿದ್ರು ಮಾಡಿರಬಹುದು. ಸಮಗ್ರ ತನಿಖೆಯಾಗಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.