ನಾನು ಬಿಟ್ಟು ಬಂದಿರೋ ಪಕ್ಷದವರ ಪಿತೂರಿ ಎಂಬ ಅನುಮಾನ – ಇಡಿ ದಾಳಿ ಬಗ್ಗೆ ಜಮೀರ್
ಪ್ರಾಪರ್ಟಿ ವಿಚಾರವಾಗಿ ದಾಳಿ ಮಾಡಿದ್ದು. ಯಾವುದೇ ನೋಟಿಸ್ ಕೊಟ್ಟಿಲ್ಲಾ ಎಂದು ಇಡಿ ದಾಳಿ ವಿಚಾರವಾಗಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಸ್ಪಷ್ಟನೆ ನೀಡಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿರೋ ಅವರು ದಾಳಿಯ ವೇಳೆ ಶೇಖಡ 90 ದಾಖಲೆಗಳನ್ನ ಕೊಡಲಾಗಿದೆ. ಕೆಲವೊಂದು ದಾಖಲೆಗಳು ಬ್ಯಾಂಕ್ ನಲ್ಲಿದೆ ಅದನ್ನ ಕೊಡಬೇಕು. 10 ದಿನದಲ್ಲಿ ದಾಖಲೆಗಳನ್ನ ಅಕೌಂಟ್ ಮೂಲಕ ಕಳಿಸಿಕೊಡಿ ಅಂತ ಹೇಳಿದ್ದಾರೆ. 10 ದಿನಗಳ ಕಾಲವಕಾಶ ಪಡೆದುಕೊಳ್ಳಲಾಗಿದೆ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕರು ಮಾತ್ರ ದೂರು ಕೊಟ್ಟಿಲ್ಲಾ. ದೊಡ್ಡ ದೊಡ್ಡ ರಾಜಕಾರಣಿ ಗಳು ದೂರು ಕೊಟ್ಟಿರೋ ಅನುಮಾನ ಇದೇ. ನಾನು ಬಿಟ್ಟು ಬಂದಿರೋ ಪಕ್ಷದವರು ಮಾಡಿರೋದು ಅನುಮಾನ ಇದೇ ಎಂದು ಪರೋಕ್ಷವಾಗಿ ಹೆಚ್ ಡಿಕೆ ಕಡೆ ಬೆರುಳು ಮಾಡಿ ತೋರಿಸಿದ್ದಾರೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು..
ಮತ್ತೆ ದೆಹಲಿ ದಂಡಯಾತ್ರೆ ಶುರು ಮಾಡಿದ `ಸೈನಿಕ’
ನಮ್ಮ ತಂಟೆಗೆ ಬಂದ್ರೆ ಸುಮ್ಮನೇ ಇರೋದಿಲ್ಲ : ಈಶ್ವರಪ್ಪ
ಖಾತೆ ಕ್ಯಾತೆ : ಪ್ರತಿಕ್ರಿಯೆ ನೀಡದ ಬೊಮ್ಮಾಯಿ
ಸಚಿವ ಸ್ಥಾನ ಸಿಕ್ಕಿರೋದು ಸನ್ಮಾನ ಸ್ವೀಕರಿಸಲಲ್ಲ, ಸೇವೆ ಮಾಡಲು : ಹೆಚ್ ಡಿಕೆ