ಬೆಂಗಳೂರು : ಡ್ರಗ್ ಮಾಫಿಯಾ ಪ್ರಕರಣದಲ್ಲಿ ಶಾಸಕ ಜಮೀರ್ ಅಹ್ಮದ್ ಹೆಸರು ಕೇಳಿಬರುತ್ತಿರುವ ಬೆನ್ನಲ್ಲೆ ಜಮೀರ್ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ದೌಡಾಯಿಸಿದ್ದಾರೆ.
ನಗರದ ಗಾಂಧಿ ಭವನ ರಸ್ತೆಯಲ್ಲಿರುವ ಸಿದ್ದರಾಮಯ್ಯ ನಿವಾಸಕ್ಕೆ ಜಮೀರ್ ಭೇಟಿ ನೀಡಿದ್ದು, ಈ ವೇಳೆ ಸಿದ್ದರಾಮಯ್ಯ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾಡಿರುವ ಆರೋಪದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಸಂಬರಗಿ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಜಮೀರ್, ‘ಆರೋಪ ಮಾಡುತ್ತಿರುವ ವ್ಯಕ್ತಿಯೂ ಗೊತ್ತಿಲ್ಲ. ಆ ಸಂಜನಾ ಕೂಡ ನನಗೆ ಗೊತ್ತಿಲ್ಲ ಸರ್. ಆದರೂ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ವಿವರಿಸಿದರಂತೆ.
ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಪ್ರಶಾಂತ್ ಸಂಬರಗಿ ವಿರುದ್ಧ ಎಫ್ ಐಆರ್ ದಾಖಲು ಮಾಡಲು ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶದಂತೆ ಎಫ್ ಐಆರ್ ದಾಖಲಿಸಲಾಗಿದೆ. ನಾನು ಕಾನೂನು ಪ್ರಕಾರವೇ ಮುನ್ನಡೆಯುತ್ತೇನೆ. ಸಂಬರಗಿ ಏನು ಹೇಳಿದರೂ ನ್ಯಾಯಾಲಯದ ಮೂಲಕ ಉತ್ತರ ನೀಡುತ್ತೇನೆ. ನ್ಯಾಯಾಲಯದ ಮೂಲಕ ಮಾನನಷ್ಟ ಕೇಸ್ ದಾಖಲಿಸುತ್ತೇನೆ. ನನ್ನ ಕೈವಾಡವಿದ್ದರೆ ತನಿಖೆ ಆಗಲಿ. ನಟಿ ಸಂಜನಾ ಈಗ ಎಲ್ಲಿದ್ದಾರೆ. ಸಿಸಿಬಿ ಪೆÇಲಿಸರ ವಶದಲ್ಲದ್ದಾರೆ. ಸರ್ಕಾರ ಯಾರದ್ದು ಇದೆ. ಹೀಗಾಗಿ ತನಿಖೆ ಆಗಲಿ ಎಂದು ಹೇಳಿದ್ದಾರೆ.
https://youtu.be/BiO5BzHk1Oc








