James | ದಿ ಕಾಶ್ಮೀರಿ ಫೈಲ್ಸ್ ಹಿಂದಿಕ್ಕಿದ ಜೇಮ್ಸ್!
ಐಎಂಡಿಬಿ ರೇಟಿಂಗ್ ನಲ್ಲಿ ಜೇಮ್ಸ್ ಗೆ ಫುಲ್ ಮಾರ್ಕ್ಸ್
ಜೇಮ್ಸ್ ಸಿನಿಮಾಗೆ 10ಕ್ಕೆ 9.9 ಐಎಂಡಿಬಿ ರೇಟಿಂಗ್
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ 8.3 ರೇಟಿಂಗ್
ಕಲೆಕ್ಷನ್ ನಲ್ಲಿಯೂ ಜೇಮ್ಸ್ ಸಿನಿಮಾ ದಾಖಲೆ
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಅಂತಾ ಅಪ್ಪು ಸಿನಿಮಾ ಜೇಮ್ಸ್ ಮತ್ತೆ ರುಜು ಮಾಡಿದೆ. ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾಗೆ ಭರ್ಜರಿಗೆ ಯಶಸ್ಸು ಸಿಕ್ಕಿದೆ. ಮೊದಲ ದಿನದ ಕಲೆಕ್ಷನ್ ನಲ್ಲಿ ಕರ್ನಾಟಕದಲ್ಲಿ ಈ ಹಿಂದೆ ಯಾವುದೇ ಸಿನಿಮಾ ಮಾಡದಂತಹ ದಾಖಲೆಯನ್ನ ಜೇಮ್ಸ್ ಸಿನಿಮಾ ಮಾಡಿದೆ. ಇದು ಅಪ್ಪುಗೆ ಕರ್ನಾಟಕದ ಜನತೆ ಕೊಟ್ಟ ಪ್ರೀತಿಯ ಅಪ್ಪುಗೆ.
ಈ ಮಧ್ಯೆ ಜೇಮ್ಸ್ ಸಿನಿಮಾ ದೇಶಾದ್ಯಂತ ಸದ್ದು ಮಾಡುತ್ತಿರುವ ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಹಿಂದಿಕ್ಕಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ತಯಾರಾದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ.
ವಿಶೇಷ ಏನೆಂದರೆ ಐಎಂಡಿಬಿ ರೇಟಿಂಗ್ನಲ್ಲಿ (IMDb Rating) ಈ ಸಿನಿಮಾಗಳ ನಡುವೆ ಪೈಪೋಟಿ ಇದೆ. ಇದರಲ್ಲಿ ‘ಜೇಮ್ಸ್’ ಸಿನಿಮಾ 10ಕ್ಕೆ 9.9 ರೇಟಿಂಗ್ ಪಡೆದುಕೊಂಡಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ 8.3 ರೇಟಿಂಗ್ ನೀಡಲಾಗಿದೆ. ಆ ಮೂಲಕ ಹಿಂದಿ ಸಿನಿಮಾವನ್ನೂ ಮೀರಿಸಿ, ರೇಟಿಂಗ್ ವಿಚಾರದಲ್ಲಿ ‘ಜೇಮ್ಸ್’ ಗಮನ ಸೆಳೆಯುತ್ತಿದೆ.
James Movie gets more ratings than The Kashmir Files in IMDb









