ಜೇಮ್ಸ್ ಚಿತ್ರಕ್ಕೆ ರಿವ್ಯೂ ಬೇಕಾ ? ಬಿಸಿನೆಸ್ ಅಲ್ಲ.. ಎಮೋಷನ್..!
ಪ್ರತಿ ಸಿನಿಮಾಗೂ ರಿವ್ಯೂ ಬರೆಯುವುದು ವಾಡಿಕೆ.. ಸಿನಿಮಾ ಹೇಗಿದೆ..? ಚಿತ್ರ ಕಥೆ ಹೇಗಿದೆ..? ನಟನೆ ಯಾವ ರೀತಿ ಇದೆ..? ಸಂಗೀತ, ಕ್ಯಾಮರಾ ವರ್ಕ್, ಯಾರು ಹೇಗೆ ನಟಿಸಿದ್ದಾರೆ ? ಚಿತ್ರದ ಪ್ಲಸ್ ಪಾಯಿಂಟ್ ಏನು ? ಮೈನಸ್ ಪಾಯಿಂಟ್ ಏನು..? ರೇಟಿಂಗ್ ಎಷ್ಟಿದೆ…? ಅಭಿಮಾನಿಗಳ ರಿಯಾಕ್ಷನ್ ಹೇಗಿದೆ ? ಹೀಗೆ ಒಂದು ಸಿನಿಮಾ ರಿಲೀಸ್ ಆದಾಗ ಚಿತ್ರದ ರಿವ್ಯೂ ಬರೆಯುವುದು ಸಾಮಾನ್ಯ.
ಆದ್ರೆ ಜೇಮ್ಸ್ ಚಿತ್ರಕ್ಕೆ ರಿವ್ಯೂ ಬೇಕಾ ? ರಿವ್ಯೂ ಬರೆದು ಸಾಧಿಸುವುದಾದ್ರೂ ಏನು ? ಪುನೀತ್ ರಾಜ್ ಕುಮಾರ್ ನಟನೆ ಹೇಗಿದೆ ಎಂದು ಯಾರಿಗೆ ಹೇಳಬೇಕು ? ರೇಟಿಂಗ್ ಎಷ್ಟು ಕೊಟ್ರೂ ಪ್ರಯೋಜನ ಏನು ? ಚಿತ್ರದ ಪ್ಲಸ್ ಪಾಯಿಂಟ್ ಏನು ? ಮೈನಸ್ ಪಾಯಿಂಟ್ ಏನು ಎಂದು ಹೇಳುವುದು ಯಾರಿಗೆ ? ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಯಾಕಂದ್ರೆ ಇದು ಅಪ್ಪು ಅಭಿನಯಿಸಿದ್ದ ಕೊನೆಯ ಚಿತ್ರ. ಹೀಗಾಗಿ ಇಲ್ಲಿ ರೇಟಿಂಗ್, ರಿಯಾಕ್ಷನ್, ಕಲೆಕ್ಷನ್ ಯಾವುದು ಕೂಡ ಲೆಕ್ಕಕ್ಕೆ ಬರುವುದಿಲ್ಲ. ಜೇಮ್ಸ್ ಚಿತ್ರ ಬರೀ ಬಿಝಿನೆಸ್ ಅಲ್ಲ. ಅದು ಎಮೋಷನ್.
ಒಂದಂತೂ ಸತ್ಯ.. ಜೇಮ್ಸ್ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಚಿತ್ರ. ಯಾಕಂದ್ರೆ ಅದು ಪುನೀತ್ ರಾಜ್ ಕುಮಾರ್ ನಟಿಸಿದ್ದ ಕಟ್ಟಕಡೆಯ ಚಿತ್ರ. ಈ ಚಿತ್ರದಲ್ಲಿ ನಟಿಸುವಾಗ ಪುನೀತ್ ರಾಜ್ ಕುಮಾರ್ ಅವರಿಗೆ ತನ್ನ ಕೊನೆಯ ಚಿತ್ರ ಅನ್ನೋ ಚಿಕ್ಕ ಸುಳಿವು ಕೂಡ ಇರಲಿಲ್ಲ. ಚಿತ್ರದ ಶೂಟಿಂಗ್ ಮುಗಿಸಿ ಇನ್ನೇನೂ ಡಬ್ಬಿಂಗ್ ಮಾಡಬೇಕು ಅನ್ನುವಷ್ಟರಲ್ಲೇ ವಿಧಿಯಾಟಕ್ಕೆ ಬಲಿಯಾದ್ರು. ಹೀಗಾಗಿ ಈ ಚಿತ್ರಕ್ಕೆ ಶಿವರಾಜ್ ಕುಮಾರ್ ಅವರು ಪುನೀತ್ ಅಭಿನಯಕ್ಕೆ ಧ್ವನಿ ನೀಡಬೇಕಾಯ್ತು.
ಇದೀಗ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂತೆ ಜೇಮ್ಸ್ ಚಿತ್ರ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಜೇಮ್ಸ್ ಚಿತ್ರದ ಅಬ್ಬರ.. ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದೇ ರೀತಿ ಪುನೀತ್ ರಾಜ್ ಕುಮಾರ್ ನಟಿಸಿರುವ ಜೇಮ್ಸ್ ಚಿತ್ರಕ್ಕೂ ರಿವ್ಯೂ ಬೇಕಾಗಿಲ್ಲ. ರೇಟಿಂಗ್ ಬೇಕಾಗಿಲ್ಲ. ಕಲೆಕ್ಷನ್ ಬೇಕಾಗಿಲ್ಲ.. ಇಲ್ಲಿ ಇರುವುದು ಬರೀ ಭಾವನೆಗಳು.. ಪುನೀತ್ ಮೇಲಿನ ಪ್ರೀತಿ, ಅಭಿಮಾನ.. ವಿಶ್ವಾಸ ಅಷ್ಟೇ.. ಹೀಗಾಗಿ ಪುನೀತ್ ರಾಜ್ ಕುಮಾರ್ ಅವರಿಗೂ ಬೆಲೆ ಕಟ್ಟುವುದು ಬೇಡ..ಜೊತೆಗಿರದ ಜೀವ ಎಂದೆಂದೂ ಜೀವಂತ.. ಅದೇ ರೀತಿ ಪುನೀತ್ ರಾಜ್ ಕುಮಾರ್ ಕೂಡ.. ಬೆಲೆಕಟ್ಟಲು ಆಗದ ಮಾಣಿಕ್ಯ ಕರ್ನಾಟಕದ ಯುವರತ್ನ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್..!









