Puneeth Rajkumar : ನಾಳೆ 11 ಗಂಟೆ 11 ನಿಮಿಷಕ್ಕೆ ಜೇಮ್ಸ್ ಟೀಸರ್ ರಿಲೀಸ್….
ನಾಳೆ ಅಂದ್ರೆ ಫೆಬ್ರವರಿ 11 ಗಂಟೆ 11 ನಿಮಿಷಕ್ಕೆ ಸರಿಯಾಗಿ ಅಪ್ಪು ಅಭಿನಯದ ಜೇಮ್ಸ್ ಸಿನಿಮಾದ ಫಸ್ಟ್ ಟೀಸರ್ ರಿಲೀಸ್ ಆಗ್ತಿದೆ… ಈಗಿನಿಂದಲೇ ಅಪ್ಪು ಅಭಿಮಾನಿಗಳು ಕಾತರರಾಗಿದ್ದು , ಟೀಸರ್ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿಬಿಟ್ಟಿದೆ… ಈ ಸಿನಿಮಾಗೆ ಅಪ್ಪು ಅವರ ಪಾತ್ರಕ್ಕೆ ಶಿವರಾಜ್ ಕುಮಾರ್ ಅವರು ವಾಯ್ಸ್ ಡಬ್ ಮಾಡಿರುವುದಾಗಿ ಈ ಹಿಂದೆ ಅವರೇ ಬಹಿರಂಗ ಪಡಿಸುವ ಮೂಲಕ , ಅಪ್ಪು ಪಾತ್ರಕ್ಕೆ ಧ್ವನಿ ನೀಡುವವರು ಯಾರೆಂಬ ಕುತೂಹಲಕ್ಕೆ ತೆರ ಎಳೆದಿದ್ದರು..
ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ ಸುಮಾರು 3 ತಿಂಗಳುಗಳು ಕಳೆದಿದೆ.. ಆದ್ರೂ ಇನ್ನೂವರೆಗೂ ಅವರ ಅಗಲಿಕೆಯ ನೋವು ಅಭಿಮಾನಿಗಳು ಕುಟುಂಬದವರನ್ನ ಕಾಡುತ್ತಿದೆ… ಈಗಲೂ ಕರುನಾಡು ಅಪ್ಪುವಿನ ಅಗಲಿಕೆಯ ನೋವಿನಿಂದ ಸಂಪೂರ್ಣವಾಗಿ ಹೊರಂಬಂದಿಲ್ಲ.. ಅಪ್ಪು ಅಭಿನಯದ ಕಡೆಯ ಸಿನಿಮಾ ಜೇಮ್ಸ್ ಆಗಿದೆ… ಈ ಸಿನಿಮಾ ಥಿಯೇಟರ್ ಗಳಿಗೆ ಮಾರ್ಚ್ 17 ಕ್ಕೆ ಅಪ್ಪು ಬರ್ತ್ ಡೇ ಪ್ರಯುಕ್ತ ರಿಲೀಸ್ ಆಗುವುದು ಬಹುತೇಕ ಖಚಿತವಾಗಿದೆ..









