james ‘ಟ್ರೇಡ್ಮಾರ್ಕ್‘ ಹಾಡು ಬಿಡುಗಡೆ! | ಹೇಗಿದೆ ಗೊತ್ತಾ ಸಾಂಗ್
ಜೇಮ್ಸ್ ಸಿನಿಮಾದ ಮೊಲದ ಹಾಡು ರಿಲೀಸ್
ಅಪ್ಪು ಅಭಿನಯದ ಕೊನೆಯ ಸಿನಿಮಾ ಜೇಮ್ಸ್
ಚೇತನ್ ಕುಮಾರ್ ಸಾಹಿತ್ಯದ ಟ್ರೇಡ್ ಮಾರ್ಕ್ ಸಾಂಗ್
ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಜೇಮ್ಸ್ ಸಾಂಗ್ ರಿಲೀಸ್
ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಗಳನ್ನ ತಣಿಸುತ್ತಾ.. ಶಿವರಾತ್ರಿ ಹಬ್ಬದ ಸಂಭ್ರಮವನ್ನ ಡಬಲ್ ಮಾಡುತ್ತಾ ಕರುನಾಡ ರಾಜ ರತ್ನ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ಮೊದಲ ಹಾಡು ಬಂದೇ ಬಿಟ್ಟಿದೆ.
ಇವ್ರ ಬಗ್ಗೆ ನಿನ್ಗೆ ಇಂಟ್ರೂಡಕ್ಷನ್ ಬೇಕಾ.. ಇವ್ರ ನಿನ್ಗೆ ಇನ್ಫಾರ್ಮೇಷನ್ ಬೇಕಾ.. ಡಿಮಾಕು ಎಲ್ಲಾ ಬಿಟ್ಟಾಕು.. ನೋಡು ಬಂದಾಯ್ತು ಪವರ್ ಫುಲ್ ಮಾಲೀಕು ಅಂತಾ ಶುರುವಾಗುವ ಹಾಡು ಅಪ್ಪು ಹಾರ್ಡ್ ಕೋರ್ ಅಭಿಮಾನಿಗಳ ಆಥಂ ಆಗೋದ್ರಲ್ಲಿ ಡೌಟೇ ಇಲ್ಲ.
ಕಂಪೇರ್ ಎಲ್ಲ ಮಾಡ್ಬೇಕೋ ಬೇಡ ಬೇರೆ ಲೆವಲ್ ಕಣೋ.. ಕಾಂಪಿಟೇಷನ್ ಎಲ್ಲಾ ಬೇಡ ಬೇರೆ ಲೆವಲ್ ಕಣೋ.. ಎಂಬ ಚೇತನ್ ಕುಮಾರ್ ಸಾಹಿತ್ಯ ಅಪ್ಪು ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದುವಂತಿದೆ. 4 ನಿಮಿಷ 20 ಸೆಕೆಂಡ್ ನ ಜೇಮ್ಸ್ ಸಿನಿಮಾದ ಟ್ರೇಡ್ ಮಾರ್ಕ್ ಸಾಂಗ್ ಗೆ ರ್ಯಾಪ್ ಟಚ್ ನೀಡಲಾಗಿದೆ.
ಹಾಡು ಟ್ರೇಡ್ ಮಾರ್ಕ್ ಅನ್ನೋ ಸಾಹಿತ್ಯದಿಂದ ಶುರುವಾಗುತ್ತಿದ್ದು, ಚರಣ್ ರಾಜ್ ಸಂಗೀತವಿದೆ.
ಸದ್ಯ ರಿಲೀಸ್ ಆಗಿರುವ ಟ್ರೇಡ್ ಮಾರ್ಕ್ ಸಾಂಗ್ ನಲ್ಲಿ ರಚಿತಾ ರಾಮ್, ನಟಿ ಶ್ರೀಲೀಲಾ, ಚಂದನ್ ಶೆಟ್ಟಿ, ಚರಣ್ ರಾಜ್ ಕಾಣಿಸಿಕೊಂಡಿದ್ದಾರೆ. james-Trademark song song released









