ಜಮ್ಮು ಕಾಶ್ಮೀರ : ಗಡಿಯೊಳಗೆ ನುಸುಳಲು ಯತ್ನಿಸಿದ ‘ಕ್ರಿಮಿ’ಯನ್ನು ಹೊಸಕಿಹಾಕಿದ ಸೇನೆ..!
ಕಣಿವೆನಾಡು ಜಮ್ಮು – ಕಾಶ್ಮೀರದ ಒಳಗೆ ನುಸುಳಲು ಯತ್ನಿಸಿದ ಉಗ್ರನನ್ನ ಸೇನೆ ಬಲಿ ಪಡೆದುಕೊಂಡಿದಿದೆ. ಹೌದು ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಬಳಿ ಸೋಮವಾರ ಬೆಳಿಗ್ಗೆ ಉಗ್ರರು ಒಳನುಸುಳಲು ಯತ್ನಿಸಿದ್ದಾರೆ. ಈ ವೇಳೆ ಸೇನೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿನಲ್ಲಿ ಉಗ್ರನೊಬ್ಬನನ್ನ ಸೇನೆ ಕೊಂದುಹಾಕಿದೆ.
ನರಕ’ದಲ್ಲಿ ಬಾಲಕಿಯರ ಮತ್ತೊಂದು ಸ್ವಾತಂತ್ರ್ಯ ಕಸಿದ ತಾಲಿಬಾನ್..!
ಈ ಬಗ್ಗೆ ರಕ್ಷಣಾ ಸಚಿವಾಲಯದ ವಕ್ತಾರರು ಅಧಿಕೃತ ಮಾಹಿತಿ ನೀಡಿದ್ದಾರೆ. ಇನ್ನೂ ಈ ಪ್ರದೇಶದಲ್ಲಿ ಸೇನೆ ಉಗ್ರರ ಬೇಟೆಗೆ ಕಾರ್ಯಾರಣೆ ಮುಂದುವರೆಸಿದೆ. ಪೂಂಚ್ ಸೆಕ್ಟರ್ ನ ಎಲ್ಒಸಿ ಬಳಿ ಉಗ್ರರು ಗಡಿ ದಾಟಲು ಪ್ರಯ್ನತಿಸಿದ್ದಾರೆ. ಸೇನೆಯು ಗಡಿ ದಾಟದಂತೆ ಎಚ್ಚರಿಕೆ ನೀಡಿದರೂ ಉಗ್ರರು ಮುಂದುವರಿದಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ. ಸ್ಥಳದಲ್ಲಿ ಸೇನೆಯು ಎಕೆ–47 ರೈಫಲ್ ವಶಪಡಿಸಿಕೊಂಡಿದೆ.








