ಕಣಿವೆನಾಡು ಕಾಶ್ಮೀರದಲ್ಲಿ ಇಂದು ಇಂಟರ್ನೆಟ್ ಸೇವೆ ಸ್ಥಗಿತ..!
ಶ್ರೀನಗರ: ಇಂದು ದೇಶಾದ್ಯಂತ 72ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಆದ್ರೆ ಸರಳವಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆ ಕಣಿವೆ ನಾಡಿನಲ್ಲಿ ಭದ್ರತಾ ದೃಷ್ಟಿಯಿಂದ ಅಹಿತಕರ ಘಟನೆಗಳು ಜರುಗದಂತೆ ಅನೇಕ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಅದ್ರಂತೆ ಕಾಶ್ಮೀರದಾದ್ಯಂತ ಇಂದು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
72ನೇ ಗಣರಾಜ್ಯೋತ್ಸವ ಸಂಭ್ರಮ : ರಾಷ್ಟ್ರಪತಿ ಧ್ವಜಾರೋಹಣ
ಇತ್ತ ಪ್ರತಿ ವರ್ಷದಂತೆ ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥ್ ನಲ್ಲಿ ಸಾಂಸ್ಕೃತಿಕ ಹಾಗೂ ಮಿಲಿಟರಿ ಕಾರ್ಯಕ್ರಮಗಳು ಜರುಗುತ್ತಿವೆ. ಆದ್ರೆ ಕೊರೊನಾ ಹಾವಳಿಯಿಂದಾಗಿ ಈ ಬಾರಿ ಗಣರಾಜ್ಯೋತ್ಸವವನ್ನ ಸರಳವಾಗಿ ಆಚರಣೆ ಮಾಡಲಾಗ್ತಿದೆ. ಒಟ್ಟು 32 ಟಾಬ್ಲ್ಯಾಡ್ ಗಳು ಪಾಲ್ಗೊಂಡಿದ್ದು, 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ರಕ್ಷಣಾ ಸಚಿವಾಲಯದ 6 ಮತ್ತು ಕೇಂದ್ರ ಸಚಿವಾಲಯ ಹಾಗೂ ಪಾರಾಮಿಲಿಟರಿ ಪಡೆಗಳ 9 ಟಾಬ್ಲ್ಯಾಡ್ ಗಳು ಪ್ರದರ್ಶನಗೊಳ್ಳುತ್ತಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








