Janardana reddy : ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ – ಇದು ಒಳ್ಳೆಯ ಬೆಳವಣಿಗೆಯಲ್ಲ – ಮಾಧುಸ್ವಾಮಿ
ತುಮಕೂರು : ರೆಡ್ಡಿ ಹೊಸ ಪಕ್ಷ ಘೋಷಣೆ ಹಿನ್ನೆಲೆ , ತುಮಕೂರಿನಲ್ಲಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ..
ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀವಿ.. ಆದ್ರೆ ಇದು ನಮ್ಮ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ.
ಜನಾರ್ಧನ ರೆಡ್ಡಿಯವ್ರು ಹೊಸ ಪಕ್ಷ ಘೋಷಣೆ ಮಾಡ್ತಾರೆ ಅಂತಾ. ಒಂದು ವಾರದಿಂದ ಸುದ್ದಿಯಲ್ಲಿತ್ತು.
ಪಕ್ಷ ಮಾಡಿದ್ದಾರೆ ಅಂತಾ ತಾವು ಹೇಳ್ತಾ ಇದ್ದೀರಿ, ಆಶ್ಚರ್ಯ ಆಗಿದೆ. ಯಾಕಂದ್ರೆ ರಾಜಕಾರಣದಲ್ಲಿ, ಇವತ್ತು ಯಾವುದೇ ರಾಜ್ಯದಲ್ಲಿ ಎರಡು ಮೂರು ಪಕ್ಷ ಮೀರಿದೆ.
ಬೇರೆ ಪಕ್ಷಗಳು ಅಷ್ಟೊಂದು ಸ್ವಾಭಾವಿಕವಾಗಿ ಬೆಳವಣಿಗೆಯನ್ನ ಕಾಣ್ತಾ ಇಲ್ಲ.
ಅದು ಯಾವ ಉದ್ದೇಶಕ್ಕೆ ಅವ್ರು ಇನ್ನೊಂದು ಪಕ್ಷ ಮಾಡಲಿಕ್ಕೆ ಹೊರಟರೋ ನಮಗೆ ಗೊತ್ತಿಲ್ಲ.
ನಮಗೆ ಒಳ್ಳೇ ಸ್ನೇಹಿತರು.
ನಾವು ಕುತ್ಕೊಂಡು ಮಾತನಾಡಿ ಕೇಳ್ತೀವಿ, ಏನು ಏತಕ್ಕೆ ಅಂತಾ ಹೇಳಿ.
ಅವರ ಆಶಯ ಏನಿದೆ ಅಂತಾ ಗೊತ್ತಿಲ್ಲ.
ಆದ್ರೆ ಇದು ನಮ್ಮ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ.
ನಂಗೆ ಗೊತ್ತಿಲ್ಲ, ಇವತ್ತು ಹೇಳಿದಿರಿ.
ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀವಿ ಎಂದಿದ್ದಾರೆ..