Janardhan Reddy : ಹೊಸ ಮನೆಗೆ ಗೃಹ ಪ್ರವೇಶ ನೆರವೇರಿಸಿದ ಅರುಣ ಲಕ್ಷ್ಮಿ..
ರಾಜ್ಯ ರಾಜಕಾರಣಕ್ಕೆ ಮತ್ತೆ ಎಂಟ್ರಿ ಕೊಡಲು ಸಜ್ಜಾಗಿರುವ ಗಣಿಧಣಿ ಜನಾರ್ಧನರಡ್ಡಿ ತಮ್ಮ ಕಾರ್ಯ ಕ್ಷೇತ್ರವನ್ನಾಗಿ ಗಂಗಾವತಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಈ ನಡುವೆ ಇಂದು ಗಂಗಾವತಿಯಲ್ಲಿ ನೂತನ ಮನೆ ಗೃಹ ಪ್ರವೇಶ ನಡೆಸಲಾಯಿತು. ಸ್ವತಃ ಜನಾರ್ದನ್ ರೆಡ್ಡಿ ಅವರು ಗೃಹ ಪ್ರವೇಶಕ್ಕೆ ಗೈರಾಗಿದ್ದರೂ, ಪತ್ನಿ ಅರುಣ ಲಕ್ಷ್ಮಿ ಅವರು ಗೃಹ ಪ್ರವೇಶ ಕಾರ್ಯವನ್ನ ನೆರವೇರಿಸಿದ್ದಾರೆ.
ಗೃಹ ಪ್ರವೇಶದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಜನಾರ್ಧನರಡ್ಡಿ ಪತ್ನಿ ಅರುಣಾ ಲಕ್ಷ್ಮಿ “ಜನಾರ್ಧನರಡ್ಡಿರವರಿಗೆ ಜನರೇ ತಂದೆ ತಾಯಿ” ಬಸವಣ್ಣನವರ ವಚನ ಮೂಲಕ ತಂದೆ ನೀನು ತಾಯಿ ನೀನು ಎಂದಿರುವ ಅರುಣಾ ಲಕ್ಷ್ಮಿ“ಜನಾರ್ಧನರಡ್ಡಿ 14 ವರ್ಷ ವನವಾಸ ಅನುಭವಿಸಿದ್ದಾರೆ.
“ಅನೇಕ ಕಷ್ಟಗಳನ್ನು ಏದುರಿಸಿರುವ ಜನಾರ್ಧನರಡ್ಡಿ ಈಗ ಬಳ್ಳಾರಿಯಿಂದ ಹತ್ತಿರ ಎನ್ನುವ ಕಾರಣಕ್ಕೆ ಗಂಗಾವತಿಯಲ್ಲಿ ಮನೆ ಮಾಡಿದ್ದಾರೆ ರಾಜಕೀಯ ಕುರಿತು ಜನಾರ್ಧನರಡ್ಡಿ ಮುಂದಿನ ವಾರ ವಿವರಿಸಲಿದ್ದಾರೆ 14 ವರ್ಷದ ನಂತರ ಈಗ ಜನಸೇವೆ ಮಾಡಬೇಕೆಂದಿದ್ದಾರೆ ಗಂಗಾವತಿ. ಸಿಂಧನೂರಿನಿಂದ ಸ್ಪರ್ಧೆಯ ಬಗ್ಗೆ ಜನಾರ್ಧನರಡ್ಡಿ ವಿವರಿಸಲಿದ್ದಾರೆ” ಎಂದು ಅರುಣ ಲಕ್ಷ್ಮಿ ಹೇಳಿಕೆ ಕೊಟ್ಟಿದ್ದಾರೆ.
Janardhan Reddy: Arun Lakshmi has entered the new house.