Janardhan Reddy: ದೆಹಲಿಯಲ್ಲಿ ಗಣಿ ಧಣಿ : ಹೊಸ ಪಕ್ಷವಾ – ಬಿಜೆಪಿಗೆ ಮರು ಪ್ರವೇಶವಾ ??
ಗಣಿ ಧಣಿ, ಮಾಜಿ ಸಚಿವ ಜನಾರ್ಧನ್ ರೆಡ್ಡಿ ರಾಜಕೀಯಕ್ಕೆ ಬರುವುದು ಬಹುತೇಕ ಫಿಕ್ಸ್ ಆಗಿದೆ. ಈಗಾಗಲೆ ಕೊಪ್ಪಳದ ಗಂಗಾವತಿಯನ್ನ ತನ್ನ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇಂದು ಗಂಗಾವತಿಯಲ್ಲಿ ಕಟ್ಟಿಸಿರುವ ಹೊಸ ಮನೆಯ ಗೃಹ ಪ್ರವೇಶ ಮಾಡಲಾಗಿದೆ.
ತಮ್ಮದೇ ಮನೆಯ ಗೃಹ ಪ್ರವೇಶಕ್ಕೆ ಜನಾರ್ಧನ್ ರೆಡ್ಡಿ ಗೈರು ಹಾಜರಾಗಿದ್ದಾರೆ. ಪತ್ನಿ ಅರುಣ ಲಕ್ಷ್ಮಿ ಅವರು ಗೃಹ ಪ್ರವೇಶ ಕಾರ್ಯನ್ನ ಶಾಸ್ರೋಕ್ತವಾಗಿ ಪೂರೈಸಿದ್ದಾರೆ. ಜನಾರ್ಧನ್ ರೆಡ್ಡಿಯವರು ದೆಹಲಿ ಪ್ರವಾಸಕ್ಕೆ ತೆರಳಿದ್ದು, ಹೊಸ ಪಕ್ಷವನ್ನ ನೊಂದಾಯಿಸಲಿದ್ದಾರೆ ಎನ್ನುವ ವಂದತಿ ಇದೆ ಅಥವಾ ಹೊಸಪಕ್ಷ ಅಥವಾ ಬಿಜೆಪಿಯಿಂದ ರಾಜಕೀಯ ಮರು ಪ್ರವೇಶಕ್ಕೆ ಸಿದ್ದತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಪ್ರಶ್ನೆಗಳಿಗೂ ಜನಾರ್ಧನ್ ರೆಡ್ಡಿ ಅವರೇ ಡಿಸೆಂಬರ್ 18 ರಂದು ಉತ್ತರಿಸುತ್ತಾರೆ ಎಂದು ಅರುಣಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ. ಇಂದು ಗೃಹ ಪ್ರವೇಶದ ನಂತರ ಮಾತನಾಡಿದ ಅವರು “ಜನಾರ್ಧನರಡ್ಡಿ 14 ವರ್ಷ ವನವಾಸ ಅನುಭವಿಸಿದ್ದಾರೆ. 14 ವರ್ಷದ ನಂತರ ಈಗ ಜನಸೇವೆ ಮಾಡಬೇಕೆಂದಿದ್ದಾರೆ ಗಂಗಾವತಿ. ಸಿಂಧನೂರಿನಿಂದ ಸ್ಪರ್ಧೆಯ ಬಗ್ಗೆ ಜನಾರ್ಧನರಡ್ಡಿ ವಿವರಿಸಲಿದ್ದಾರೆ” ಎಂದು ಅರುಣ ಲಕ್ಷ್ಮಿ ಹೇಳಿಕೆ ಕೊಟ್ಟಿದ್ದಾರೆ.
Janardhan Reddy: Gani Dhani in Delhi: New Party – Re-entry into BJP??