ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಮ್ಮ ಕುಟುಂಬ ಸಮೇತರಾಗಿ ಪಾಪ ಪರಿಹಾರಕ್ಕಾಗಿ ರಾಮೇಶ್ವರನ ಮೊರೆ ಹೋಗಿದ್ದಾರೆ.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಂಬನ್ ನಡುಗಡ್ಡೆಯಲ್ಲಿರುವ ರಾಮೇಶ್ವರ ಪುಣ್ಯ ಕ್ಷೇತ್ರಕ್ಕೆ ಜನಾರ್ದನ ರೆಡ್ಡಿ ಕುಟುಂಬ ತೀರ್ಥ ಯಾತ್ರೆ ಕೈಗೊಂಡಿದೆ. ಈ ಬಗ್ಗೆ ಜನಾರ್ದನ ರೆಡ್ಡಿ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಪಾಪ ಪರಿಹಾರಕ್ಕೆ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಶಿವನನ್ನು ಪೂಜಿಸಿದ ಶ್ರೀರಾಮಚಂದ್ರ. ಹಿಂದೂ ಧರ್ಮದ ಪುಣ್ಯಕ್ಷೇತ್ರವಾದ ರಾಮೇಶ್ವರಂ ಗೆ ನಾನು ನನ್ನ ಕುಟುಂಬ ಸಮೇತ ಭೇಟಿ ನೀಡಿರುವ ಕುರಿತು ಹಾಗೂ ರಾಮೇಶ್ವರಂ ನಲ್ಲಿರುವ ಜ್ಯೋತಿಲಿರ್ಂಗದ ಮಹಿಮೆ ಹಾಗೂ ಇತಿಹಾಸದ ಕುರಿತು ಇಂದು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ರಾಮೇಶ್ವರಂ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಫೋಟೊಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
https://youtu.be/pDPQuy6Xvhk