Janardhana Reddy : ನೂತನ ರಾಜಕೀಯ ಪಕ್ಷ ಘೋಷಿಸಿದ ಜನಾರ್ಧನ್ ರೆಡ್ಡಿ…
ಬಿಜೆಪಿ ವಿರುದ್ಧ ಅಲ್ಲಲ್ಲಿ ಅಸಮಧಾನ ವ್ಯಕ್ತಪಡಿಸುತ್ತಿದ್ದ ಮಾಜಿ ಸಚಿವ ಗಣಿ ಧಣಿ ಜನಾರ್ಧನ್ ರೆಡ್ಡಿ ಯವರು ಇದೀಗ ನೇರಾ ನೇರಾ ಸೆಡ್ಡು ಹೊಡೆದಿದ್ದು, ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಇಂದು ಬೆಂಗಳೂರು ನಿವಾಸದಲ್ಲಿ ಸುದ್ದಿ ಗೋಷ್ಟಿ ನಡೆಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಬಸವಣ್ಣ ಹಾದಿಯಲ್ಲಿ ನಡೆಯಲು ಸಂಕಲ್ಪ ಮಾಡಿದ್ದೇನೆ. ಜಾತಿ,ಮತ, ಬೇಧ, ಭಾವ ಇಲ್ಲದೇ ಮೇಲು ಕೇಳು ಇಲ್ಲದ ಹಾಗೆ ಕೆಲಸ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ. ಬಸವಣ್ಣನವರ ಸ್ಮರಣೆ ಮಾಡುತ್ತಾ ಸಾರ್ವಜನಿಕ ಬದುಕಿಗೆ ಬರುತ್ತಿದ್ದೇನೆ. ಬಿಜೆಪಿ ಜೊತೆ ನಾನು ಬಾಂಧವ್ಯವನ್ನು ಕಡಿದುಕೊಳ್ಳುತ್ತಿದ್ದೇನೆ. ಈ ಕಾರಣಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ನಿರ್ಮಾಣ ಮಾಡ್ತಿದ್ದೇನೆ ಎಂದು ತಿಳಿಸಿದ್ದಾರೆ.
Janardhana Reddy: Janardhana Reddy announced a new political party…