ಮಂಡ್ಯ: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ, ಹತ್ಯೆ ಖಂಡಿಸಿ ಮಹಿಳಾ ಮುನ್ನಡೆ ಜನಶಕ್ತಿ ಸಂಘದ ಕಾರ್ಯಕರ್ತೆಯರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಹಾಗೂ ಗಾಂಧಿ ಪ್ರತಿಮೆ ಬಳಿ ಸೇರಿದ ಪ್ರತಿಭಟನಾಕರರು, ನಿರ್ಲಕ್ಷ್ಯ ತೋರಿದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆ ಮತ್ತು ವಾರಸುದಾರರಿಗೆ ಮಾಹಿತಿ ನೀಡದೆ ಮೃತದೇಹಕ್ಕೆ ಬೆಂಕಿಯನ್ನು ಇಟ್ಟಿದ್ದಾರೆ. ಈ ಕೃತ್ಯ ನಡೆಸಿದವರನ್ನು ಗಲ್ಲಿಗೇರಿಸಬೇಕು. ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಿ ನ್ಯಾಯ ಒದಗಿಸಿ ಕೊಡಬೇಕೆಂದು ಜನಶಕ್ತಿ ಸಂಘದ ಕಾರ್ಯಕರ್ತೆಯರು ಆಗ್ರಹಿಸಿದರು.
‘ಲಕ್ಷ್ಮೀಪುತ್ರ’ನಾದ ಸ್ಯಾಂಡಲ್ ವುಡ್ ಉಪಾಧ್ಯಕ್ಷ ಚಿಕ್ಕಣ್ಣ..ಸಾಥ್ ಕೊಟ್ಟ ಎ.ಪಿ.ಅರ್ಜುನ್
ಅಂಬಾರಿ, ಅದ್ಧೂರಿ, ಐರಾವತ, ರಾಟೆಯಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಎ.ಪಿ.ಅರ್ಜುನ್ ತಮ್ಮದೇ ಎಪಿ ಅರ್ಜುನ್ ಫಿಲ್ಮಂಸ್ ನಡಿ ಕಿಸ್, ಅದ್ಧೂರಿ ಲವರ್ಸ್ ನಂತಹ ಸದಭಿರುಚಿ ಚಿತ್ರಗಳನ್ನು ಕನ್ನಡ...