ಲಾಕ್ ಡೌನ್ ಪದ ಬಳಸದೇ ರಾಜ್ಯದಲ್ಲಿ ಜನತಾ ಕರ್ಫ್ಯೂ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಓಟಕ್ಕೆ ಕಡಿವಾಣ ಹಾಕಲು ಸರ್ಕಾರ ಇಂದು ಕಠಿಣ ನಿಮಯಗಳನ್ನು ಜಾರಿ ತರುವ ಎಲ್ಲಾ ಸಾಧ್ಯತೆಗಳಿವೆ.
ನಿನ್ನೆ ರಾಜ್ಯದಲ್ಲಿ ಕೊರೊನಾ ಸ್ಫೋಟವಾಗಿದ್ದು, ಸರ್ಕಾರಕ್ಕೆ ದಿಕ್ಕು ತೋಚದಂತಾಗಿದೆ. ಈ ಮಧ್ಯೆ ತಜ್ಞರು ಲಾಕ್ ಡೌನ್ ಸಲಹೆ ನೀಡಿದ್ದು, ಸರ್ಕಾರ ಕೂಡ ಈ ಬಗ್ಗೆ ಚರ್ಚೆ ನಡೆಸುತ್ತಿದೆ.
ಈ ಮಧ್ಯೆ ಸರ್ಕಾರ ಲಾಕ್ ಡೌನ್ ಪದ ಬಳಸದೇ ರಾಜ್ಯದಲ್ಲಿ ಮುಂಬೈ ಮಾದರಿಯಲ್ಲಿ ಜನತಾ ಕಫ್ರ್ಯೂ ಜಾರಿ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮುಂಬೈನಲ್ಲಿ ಜನತಾ ಕಫ್ರ್ಯೂ ಕ್ರಮ ತೆಗೆದುಕೊಂಡ ಪರಿಣಾಮ ಸೋಂಕು ಪೀಕ್ ಗೆ ಹೋಗಿ ಇಳಿದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಜನತಾ ಕಫ್ರ್ಯೂ ವಿಧಿಸುವ ಸಾಧ್ಯತೆಗಳಿವೆ.

ಇನ್ನೊಂದೆಡೆ ಇಂದು ರಾತ್ರಿಯಿಂದಲೇ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡುವ ಚಿಂತನೆಯಲ್ಲಿ ಸರ್ಕಾರ ಇದೆ ಎಂದು ಕೂಡ ಹೇಳಲಾಗುತ್ತಿದೆ.
ಕನಿಷ್ಟ 15 ದಿನಗಳ ಕಾಲ ನಗರದಲ್ಲಿ ಲಾಕ್ ಡೌನ್ ಅವಶ್ಯಕತೆ ಇದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಇಂದು ರಾತ್ರಿಯಿಂದಲೇ ಲಾಕ್ ಆಗುವ ಸಾಧ್ಯತೆಗಳಿವೆ.
ಇದು ವೀಕೆಂಡ್ ಕಫ್ರ್ಯೂ ರೀತಿಯಲ್ಲೇ ಇರಲಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10 ರವರೆಗೆ ಇದ್ದ ಸಮಯವನ್ನ ಬದಲಿಸಿ 8 ಗಂಟೆಗೆ ಸೀಮಿತಗೊಳಿಸುವ ಸಾಧ್ಯತೆಗಳಿವೆ.
ಹಾಗೇ ನಗರದಿಂದ ಯಾರೂ ಹೊರ ಹೋಗದೇ ಇರುವ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.









