ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದ ಜನತಾ ಕರ್ಫ್ಯೂಗೆ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಸಂಜೆ 5 ಗಂಟೆಗೆ ದೇಶದಾದ್ಯಂತ ಜನ ರು ತಮ್ಮ ಮನೆಯ ಗೇಟ್ ಮುಂದೆ ಬಾಲ್ಕನಿಯಲ್ಲಿ ನಿಂತು ಕೊರೊನಾ ವಿರುದ್ಧದ ಹೋರಾಟದಲ್ಲಿರುವ ವೈದ್ಯರು, ನರ್ಸ್ ಗಳು, ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ರು. ಜಾಗಟೆ ಹೊಡೆದು ತಮ್ಮ ಕೃತಜ್ಞತೆ ತಿಳಿಸಿದ್ರು. ಆದ್ರೆ ಧನ್ಯವಾದ ಸಮರ್ಪಣೆಯ ವಿಡಿಯೋ ಒಂದನ್ನು ಶೇರ್ ಮಾಡಿರುವ ಪ್ರಕಾಶ್ ರಾಜ್ ‘ಯಥಾ ರಾಜ, ತಥಾ ಪ್ರಜಾ’ ಎಂದು ಟೀಕೆ ಮಾಡಿದ್ದಾರೆ.
https://www.facebook.com/PrakashRajOfficial/videos/236547544140629/
ವೈದ್ಯಕೀಯ ಸಿಬ್ಬಂದಿ, ಪೊಲೀಸರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ 5 ಗಂಟೆಗೆ ಚಪ್ಪಾಳೆ ತಟ್ಟಿ ಅಂತ ಪ್ರಧಾನಿ ಸೂಚಿಸಿದ್ದ ಹಿನ್ನೆಲೆಯಲ್ಲಿ ಗುಜರಾತ್‌ನ ಅಹಮದಾಬಾದ್‌ನ ಖಾದಿಯಾ ಪ್ರದೇಶದಲ್ಲಿ ಜನರೆಲ್ಲಾ ಬೀದಿಗಿಳಿದಿದ್ರು. ನೂರಾರು ಜನ ಭಾರತದ ಬಾವುಟ ಹಿಡಿದು, ಜಾಗಟೆ ಹಿಡಿದು ಮೆರವಣಿಗೆ ನಡೆಸಿದ್ರು. ಆ ಮೂಲಕ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ರು. ಇಲ್ಲಿಗೆ ಜನತಾ ಕರ್ಫ್ಯೂ ಉದ್ದೇಶವೇ ನೀರುಪಾಲಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಡಿಯೋನ ಶೇರ್ ಮಾಡಿರೋ ನಟ ಪ್ರಕಾಶ್ ರಾಜ್, ಯಥಾ ರಾಜ ತಥಾ ಪ್ರಜಾ ಅಂತ ಕ್ಯಾಪ್ಶನ್ ಕೊಟ್ಟು ವ್ಯಂಗ್ಯವಾಡಿದ್ದಾರೆ.









