ಮಕ್ಕಳು ಮಾಡಿಕೊಂಡರೆ ಹಣ ನೀಡಲು ಮುಂದಾದ ಜಪಾನ್ ಸರ್ಕಾರ..
ಒಂದೆಡೆ ಭಾರತವು ಜನಸಂಖ್ಯೆ ನಿಯಂತ್ರಣಕ್ಕೆ ಮಾಡಬಾರದು ಕಸರತ್ತು , ಸಾಕಷ್ಟು ಯೋಜನೆಗಳನ್ನ ರೂಪಿಸುತ್ತಿದೆ. ಆದ್ರೆ ವಿಶ್ವದ ಅತಿ ಹೆಚ್ಚು ಜನ ಸಂಖ್ಯಾ ರಾಷ್ಟ್ರವಾಗಿರೋ ಚೀನಾ ಮಾತ್ರ ಜನರಿಗೆ ಮಕ್ಕಳ ಮಾಡಿಕೊಳ್ಳುವಂತೆ ಉತ್ತೇಜನ ನೀಡುತ್ತಾ , ನಾನಾ ಸೌಲಭ್ಯಗಳನ್ನ ಘೋಷಿಸಿದೆ.
ಇತ್ತ ಇದೀಗ ಜನಸಂಖ್ಯೆಯಲ್ಲಿ ಚಿಕ್ಕದೇಶವಾಗಿರೋ ಜಪಾನ್ ನಲ್ಲಿ ಜನನ ಪ್ರಮಾಣ ಗಣನೀಯವಾಗಿ ಇಳಿಮುಖ ಆಗುತ್ತಿದೆ. ಹೀಗಾಗಿ ಅಲ್ಲಿನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಜನರು ಮಗುವನ್ನು ಮಾಡಿಕೊಂಡರೆ ಈಗಾಗಲೇ ನೀಡುತ್ತಿರುವ ಹಣಕ್ಕಿಂತಲೂ 48 ಸಾವಿರ ರೂ. ಅಧಿಕ ನೀಡುವುದಾಗಿ ಘೋಷಿಸಿದೆ. ಈಗಾಗಲೇ ಮಗುವಿನ ಜನನದ ನಂತರ ಹೊಸ ಪೋಷಕರಿಗೆ ಹೆರಿಗೆ ಮತ್ತು ಶಿಶುಪಾಲನೆಗಾಗಿ ಒಟ್ಟು 420,000 ಯೆನ್ ಗಳನ್ನ ಅನುದಾನವನ್ನು ನೀಡುತ್ತಿದೆ.
ಇದೀಗ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವ ಕ್ಯಾಟೊ ಕಟ್ಸುನೋಬು ಮಗು ಜನನದ ನಂತರ ನೀಡಲಾಗುವ ಹಣವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಆ ಸಂಖ್ಯೆಯನ್ನು 5,00,000 ಯೆನ್ ಗೆ ಹೆಚ್ಚಿಸುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಈ ಬಗ್ಗೆ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಯೋಜನೆಯನ್ನು ಚರ್ಚಿಸಿದ್ದಾರೆ. ಸರ್ಕಾರ 2023ರ ಆರ್ಥಿಕ ವರ್ಷಕ್ಕೆ ಅಂಗೀಕರಿಸುವ ಸಾಧ್ಯತೆಯಿದೆ.
Japan: The Japanese government has offered to give money if children do it.








