ಜಪಾನ್‌ನ ಕಗೋಶಿಮಾದಲ್ಲಿ ಸಕುರಾಜಿಮಾ ಜ್ವಾಲಾಮುಖಿ ಸ್ಪೋಟ…
ಜಪಾನ್‌ನ ಕಗೋಶಿಮಾ ಪ್ರಾಂತ್ಯದಲ್ಲಿರುವ ಸಕುರಾಜಿಮಾ ಜ್ವಾಲಾಮುಖಿ ಭಾನುವಾರ ರಾತ್ರಿ ಸ್ಫೋಟಗೊಂಡಿದೆ. ಸ್ಪೋಟದಿಂದಾಗಿ ಬೂದಿ ಮತ್ತು ಕಲ್ಲುಗಳು ನಿರಂತರವಾಗಿ ಹೊರಬರುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಸ್ಥಳೀಯ ಕಾಲಮಾನ ರಾತ್ರಿ 8:05 ರ ಸುಮಾರಿಗೆ ಸಕುರಾಜಿಮಾ ಜ್ವಾಲಾಮುಖಿಯು ಸ್ಫೋಟಗೊಂಡಿದೆ ಎಂದು ಜಪಾನ್‌ನ ಹವಾಮಾನ ಸಂಸ್ಥೆ ತಿಳಿಸಿದೆ. ಸುತ್ತಮುತ್ತಲಿನ ಜನರ ಮನೆಗಳನ್ನ ಖಾಲಿ ಮಾಡಿಸಲಾಗುತ್ತಿದೆ. ಜ್ವಾಲಾಮುಖಿಯಿಂದ ದೊಡ್ಡ ಪ್ರಮಾಣದ ಸ್ಫೋಟ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಅಲ್ಲಿನ ಹವಾಮಾನ ಸಂಸ್ಥೆ ಅಂದಾಜಿಸಿದೆ.
ಜಪಾನ್ನಲ್ಲಿ ಅತ್ಯಂತ ಸಕ್ರಿಯವಾಗಿ ಜ್ವಾಲಾಮುಖಿಗಳಲ್ಲಿ ಒಂದಾಗಿರುವ ಸಕುರಾಜಿಮಾ ಸ್ಪೋಟದಿಂದ ಕಗೋಶಿಮಾ ನಗರದ ಮೂರು ಕಿಲೋಮೀಟರ್ ವ್ಯಾಪ್ತಿಯೊಳಗೆ ಜ್ವಾಲಾಮುಖಿ ಬೂದಿ ಮತ್ತು ಬಂಡೆಗಳು ಬೀಳಬಹುದು ಎಂದು ಹವಾಮಾನ ಸಂಸ್ಥೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಜಪಾನ್‌ನ ಸರ್ಕಾರಿ ಟಿವಿ NHK ವಾಹಿನಿಯಲ್ಲಿ ಪ್ರಸಾರವಾದ ದೃಶ್ಯಗಳಲ್ಲಿ ಜ್ವಾಲಾಮುಖಿಯಿಂದ ಕಿತ್ತಳೆ ಬಣ್ಣದ ಜ್ವಾಲೆ ಮತ್ತು ಬೂದಿ ಸ್ಪೋಟಗೊಳ್ಳುವುದನ್ನ ನೋಡಬಹುದು ನಾವು ಜನರ ಜೀವಕ್ಕೆ ಆದ್ಯತೆ ನೀಡುತ್ತಿದ್ದೇವೆ ಮತ್ತು ಪರಿಸ್ಥಿತಿಯನ್ನ ನಿಯಂತ್ರಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದು ಉಪ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಹಿಕೊ ಇಸೊಜಾಕಿ ಹೇಳಿದ್ದಾರೆ.
Japan’s Sakurajima volcano erupts, prompting highest alert








