ವಂಚಕನಿಂದ 10 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಗಿಫ್ಟ್ ಪಡೆದ ಜಾಕ್ವೆಲಿನ್
ನವದೆಹಲಿ : ಲಂಕಾ ಸುಂದರಿ , ಬಾಲಿವುಡ್ ನ ಹಾಟ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ.. ಬೇಡದ ವಿಚಾರಕ್ಕೆ ಸುದ್ದಿಯಾಗ್ತಿದ್ದಾರೆ.. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ಸಿಕ್ಕಿಬಿದ್ದಿರುವ ಮೂಲತಃ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ನಿಂದ ಜಾಕ್ವೆಲಿನ್ ಕೋಟೀ ಕೋಟಿ ಮೊತ್ತದ ಗಿಫ್ಟ್ ಗಳನ್ನ ತೆಗೆದುಕೊಂಡಿದ್ದಾರೆ.. ತಿಂಗಾಳುನುಗಟ್ಟಲೆ ನಿರಂತರ ಫೋನಿನಲ್ಲಿ ಮಾತನಾಡಿರೋದು ಬೆಳಕಿಗೆ ಬಮದಿದೆ.. ಅಲ್ಲದೇ ನಟಿ ಹಾಗೂ ಈತ ಇಬ್ರೂ ತುಂಬಾ ಕ್ಲೋಸ್ ಆಗಿರುವಂತಹ ಫೋಟೋಗಳು ಸಹ ಜಾತಾಣದಲ್ಲಿ ವೈರಲ್ ಆಗಿದೆ.. ಇದೆಲ್ಲದ್ರ ನಡುವೆ ಈ ಸುಕೇಶ್ ಜಾಕ್ವೆಲಿನ್ ಫರ್ನಾಂಡಿಸ್‍ಗೆ 10 ಕೋಟಿ ರೂ. ಬೆಲೆ ಬಾಳುವ ಉಡುಗೊರೆ ನೀಡಿದ್ದಾನೆ ಎಂದು ರಾಷ್ಟ್ರಯ ಮಾಧ್ಯಮದಲ್ಲಿ ವರದಿ ಮಾಡಲಾಗಿದೆ..
ಚಂದ್ರಶೇಖರ್ ಭಲೀ ಕೋಟ್ಯಂತರ ರೂ. ಮೌಲ್ಯದ ಉಡುಗೊರೆಯನ್ನು ಪಡೆದಿರೋದರ ಕುರಿತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಚಾರ್ಜ್‍ಶೀಟ್‍ನಲ್ಲಿ ತಿಳಿಸಿದೆ. ಈ ಸುಕೇಶ್ 17 ನೇ ವಯಸ್ಸಿನಿಂದಲೇ ಜನರನ್ನು ವಂಚಿಸಲು ಪ್ರಾರಂಭಿಸಿದ್ದ. ಈತ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಜನರನ್ನು ವಂಚಿಸುತ್ತಿದ್ದ. ನಂತರ ರಾಜಕಾರಣಿಯೊಬ್ಬರ ಸಂಬಂಧಿ ಎಂದು ಹೇಳಿಕೊಂಡು 100ಕ್ಕೂ ಅಧಿಕ ಜನರಿಗೆ ವಂಚನೆ ಮಾಡಿದ್ದ.. ಅಲ್ಲದೇ 2011 ರಲ್ಲಿ ಚೆನ್ನೈನ ಕೆನರಾ ಬ್ಯಾಂಕ್‍ನಲ್ಲಿ ವಂಚನೆಗೆ ಮುಂದಾಗಿದ್ದಾಗ ಚಂದ್ರಶೇಖರ್ ಮತ್ತು ಆತನ ಗೆಳತಿ ಮರಿಯಾ ಪಾಲ್‍ಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಇಬ್ಬರೂ ಜಾಮೀನಿನ ಮೇಲೆ ಹೊರ ಬಂದಿದ್ದರು.
ಇದಾದ ಬಳಿಕವೂ ಚಂದ್ರಶೇಖರ್, ಅದಿತಿ ಎಸ್.ಸಿಂಗ್ ಅವರಿಂದ 200 ಕೋಟಿ ರೂ. ಪಡೆದು ವಂಚಿಸಿದ್ದ ಹಿನ್ನೆಲೆಯಿಂದ ಮತ್ತೆ ಜೈಲು ಪಾಲಾದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ್ ರಾಮದಾನಿ ಮತ್ತು ದೀಪಕ್ ರಾಮದಾನಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಜೈಲಿನೊಳಗೆ ಮೊಬೈಲ್ ಫೋನ್ ಬಳಸಿ ಸುಲಿಗೆ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಅವರಿಗೆ ಈತ ಕೋಟ್ಯಂತರ ಮೌಲ್ಯದ ಉಡುಗೊರೆ ನೀಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಇಡಿ ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.
ಸುಕೇಶ್ ಮತ್ತು ನಟಿ ಜಾಕ್ವೆಲಿನ್ 2021 ಜನವರಿಯಿಂದಲೂ ಪ್ರತಿದಿನ ಪರಸ್ಪರ ಫೋನ್‍ನಲ್ಲಿ ಮಾತನಾಡುತ್ತಿದ್ದರು. ಬಳಿಕ ವಜ್ರದ ಆಭರಣಗಳು, 36 ಲಕ್ಷಕ್ಕೂ ಅಧಿಕ ಬೆಲೆಯ ನಾಲ್ಕು ಪರ್ಷಿಯನ್ ಬೆಕ್ಕುಗಳನ್ನ ಗಿಫ್ಟ್ ರೂಪದಲ್ಲಿ ಜಾಕ್ವೆಲಿನ್ ಗೆ ಕಳುಹಿಸಿದ್ದ ಎನ್ನಲಾಗಿದೆ.