ಟಿ-20 ಕ್ರಿಕೆಟ್ ನಲ್ಲಿ ದಾಖಲೆ ಬರೆಯಲಿರುವ ಬೂಮ್ರಾ.. ಚಾಹಲ್ ರೆಕಾರ್ಡ್ ಅಳಿಸಿ ಹಾಕಲಿದ್ದಾರೆ ಜಸ್ಪ್ರಿತ್
ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ಸ್ಥಿತಿ ತೂಗೂಯ್ಯಾಲೆಯಲ್ಲಿದೆ. ಲೀಗ್ ನ ಎರಡೂ ಪಂದ್ಯಗಳನ್ನು ಸೋತಿರುವ ವಿರಾಟ್ ಕೊಹ್ಲಿ ಈಗ ಅಫಘಾನಿಸ್ತಾನ ವಿರುದ್ಧ ಗೆಲುವನ್ನು ಎದುರು ನೋಡುತ್ತಿದೆ.
ಬಿ ಗುಂಪಿನಲ್ಲಿ ಪಾಕಿಸ್ತಾನ ಸೆಮೀಸ್ ಎಂಟ್ರಿಯನ್ನು ಖಚಿತಪಡಿಸಿಕೊಂಡಿದೆ. ಇನ್ನೊಂದೆಡೆ ನ್ಯೂಜಿಲೆಂಡ್ ಭಾರತದ ವಿರುದ್ಧ ಗೆದ್ದಿರುವುದರಿಂದ ಸೆಮಿಫೈನಲ್ ಎಂಟ್ರಿಯಾಗುವ ಹಾದಿ ಕೂಡ ಸುಗಮವಾಗಿದೆ. ಒಂದು ವೇಳೆ ನ್ಯೂಜಿಲೆಂಡ್ ಇನ್ನುಳಿದ ಪಂದ್ಯಗಳಲ್ಲಿ ಒಂದು ಪಂದ್ಯ ಸೋತು, ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳನ್ನು ಗೆದ್ರೆ ಮಾತ್ರ ಮುಂದಿನ ಹಾದಿ ಪ್ರವೇಶಿಸಬಹುದು.
ಈ ನಡುವೆ, ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಜಸ್ಪ್ರಿತ್ ಬೂಮ್ರಾ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ದಾಖಲೆ ಬರೆಯಲು ರೆಡಿಯಾಗಿದ್ದಾರೆ. ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಲು ಬೂಮ್ರಾಗೆ ಬೇಕಾಗಿರೋದು ಕೇವಲ ಮೂರು ವಿಕೆಟ್ ಮಾತ್ರ.
ಸದ್ಯ ಭಾರತದ ಪರ ಯುಜುವೇಂದ್ರ ಚಾಹಲ್ ಅವರು ಗರಿಷ್ಠ ವಿಕೆಟ್ ಪಡೆದ ಲೀಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದ್ರೆ ಈ ಬಾರಿಯ ಟಿ- ಟ್ವೆಂಟಿ ವಿಶ್ವಕಪ್ ನಲ್ಲಿ ಚಾಹಲ್ ಸ್ಥಾನ ಪಡೆದುಕೊಂಡಿಲ್ಲ.
ಅಂದ ಹಾಗೇ ಚಾಹಲ್ 49 ಪಂದ್ಯಗಳಲ್ಲಿ 63 ವಿಕೆಟ್ ಪಡೆದುಕೊಂಡಿದ್ದಾರೆ. ಜಸ್ಪ್ರಿತ್ ಬೂಮ್ರಾ 51 ಪಂದ್ಯಗಳಲ್ಲಿ 61 ವಿಕೆಟ್ ಪಡೆದುಕೊಂಡಿದ್ದಾರೆ.