Jasprit Bumrah | ವಿಶ್ವಕಪ್ ನಿಂದ ಬುಮ್ರಾ ದೂರವಾಗಿಲ್ಲ
ಟೀಂ ಇಂಡಿಯಾದ ಸ್ಟಾರ್ ಜಸ್ ಪ್ರಿತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಯಿಂದ ಟಿ 20 ವಿಶ್ವಕಪ್ ಗೆ ದೂರವಾಗಿರುವುದು ಗೊತ್ತಿರುವ ವಿಚಾರವೇ.
ಇದು ಟೀಂ ಇಂಡಿಯಾಗೆ ದೊಡ್ಡ ಹೊಡೆತವಾಗಿದೆ.
ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದು, ಬುಮ್ರಾ ಟಿ 20 ವಿಶ್ವಕಪ್ ಗೆ ಸಂಪೂರ್ಣವಾಗಿ ದೂರವಾಗಿಲ್ಲ. ವಿಶ್ವಕಪ್ ಒಳಗೆ ಅವರು ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ ಎಂದಿದ್ದಾರೆ.
ನಿಜ ಹೇಳಬೇಕು ಅಂದ್ರೆ ಬುಮ್ರಾ ಟಿ 20 ವಿಶ್ವಕಪ್ ಗೆ ದೂರವಾಗಿರುವ ಬಗ್ಗೆ ಈವರೆಗೂ ಬಿಸಿಸಿಐ ಅಧಿಕೃತ ಪ್ರಕಟನೆ ಹೊರಡಿಸಿಲ್ಲ.

ಕೇವಲ ಸೌತ್ ಆಫ್ರಿಕಾ ಸರಣಿಯಿಂದ ದೂರವಾಗಿದ್ದಾರೆ ಎಂದು ಮಾತ್ರ ತಿಳಿಸಿದೆ. ಸದ್ಯ ಬುಮ್ರಾ ಬೆಂಗಳೂರಿನ ಎನ್ ಸಿಎ ಅಕಾಡೆಮಿಯಲ್ಲಿದ್ದಾರೆ.
ಸೌತ್ ಆಫ್ರಿಕಾ ಸರಣಿಗಾಗಿ ಬುಮ್ರಾ ಬದಲಿಗೆ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಸೌರವ್, ಬುಮ್ರಾ ಟಿ 20 ವಿಶ್ವಕಪ್ ನಿಂದ ದೂರವಾಗಿಲ್ಲ. ಮೆಗಾಟೂರ್ನಿ ನಡೆಯಲು ಇನ್ನೂ ಟೈಮ್ ಇದೆ.
ಈಗಲೇ ನಾವು ಏನು ಹೇಳಲು ಸಾಧ್ಯವಿಲ್ಲ. ವರ್ಲ್ಡ್ ಕಪ್ ವೇಳೆಗೆ ಬುಮ್ರಾ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಇನ್ನು ಟಿ 20 ವಿಶ್ವಕಪ್ ಅಕ್ಟೋಬರ್ 16 ರಿಂದ ಆರಂಭವಾಗಲಿದೆ.
jasprit-bumrah-still-not-ruled-out-t20-world-cup








