ADVERTISEMENT
Sunday, April 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

2002ರಲ್ಲಿ ಸೌರವ್ ಗಂಗೂಲಿ ಮಾತಿಗೂ ಇಲ್ಲ ಅಂದಿದ್ದೇಕೆ ಜಾವಗಲ್ ಶ್ರೀನಾಥ್…!

admin by admin
June 13, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

2002ರಲ್ಲಿ ಸೌರವ್ ಗಂಗೂಲಿ ಮಾತಿಗೂ ಇಲ್ಲ ಅಂದಿದ್ದೇಕೆ ಜಾವಗಲ್ ಶ್ರೀನಾಥ್…!

ಜಾವಗಲ್ ಶ್ರೀನಾಥ್. ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್. ಸರಳ-ಸಜ್ಜನಿಕೆಯ ಕ್ರಿಕೆಟಿಗ. ವೃತ್ತಿ ಬದುಕಿಲ್ಲಿ ಒಂಚೂರು ಕಳಂಕವನ್ನು ತಂದುಕೊಳ್ಳದ ಅಪ್ರತಿಮ ವೇಗಿ. ದಶಕಗಳ ಕಾಲ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗದ ಸಾರಥ್ಯವನ್ನು ವಹಿಸಿಕೊಂಡಿದ್ದರು. ಆದ್ರೆ ತನ್ನ ವೃತ್ತಿ ಬದುಕಿನ ಕೊನೆಯ ದಿನಗಳಲ್ಲಿ ಭಾರತದ ಆಯ್ಕೆ ಸಮಿತಿಯು ಶ್ರೀನಾಥ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿತ್ತು.
ಈ ವಿಚಾರವನ್ನು ಸ್ವತಃ ಜಾವಗಲ್ ಶ್ರೀನಾಥ್ ಅವರೇ ಹೇಳಿಕೊಂಡಿದ್ದಾರೆ. ಹಾಗೇ ಸೌರವ್ ಗಂಗೂಲಿಗೆ ತಾನು ತಂಡದಲ್ಲಿರಬೇಕು ಎಂಬ ಮನಸ್ಸಿತ್ತು. ಅದ್ರಲ್ಲೂ 2002ರ ಇಂಗ್ಲೆಂಡ್ ಪ್ರವಾಸಕ್ಕೆ ನಾನು ಟೀಮ್ ಇಂಡಿಯಾದಲ್ಲಿರಬೇಕು ಎಂದು ಸ್ವತಃ ಗಂಗೂಲಿಯೇ ಫೋನ್ ಮಾಡಿ ಹೇಳಿದ್ದರು. ಆದ್ರೆ ನಾನು ಗಂಗೂಲಿಯವರ ಮಾತನ್ನು ಕೇಳಲಿಲ್ಲ. ಇಲ್ಲ. ನಾನು ಬರಲ್ಲ ಎಂದು ಹೇಳಿದ್ದೆ. ಯಾಕಂದ್ರೆ ನಾನು ಆ ಸಂದರ್ಭದಲ್ಲಿ ಸಾಕಷ್ಟು ನೊಂದುಕೊಂಡಿದ್ದೆ. ಆಯ್ಕೆ ಸಮಿತಿ ನನ್ನನ್ನು ಆ ರೀತಿ ನಡೆಸಿಕೊಂಡಿತ್ತು ಅಂತ ಶ್ರೀನಾಥ್ ಹೇಳಿದ್ದಾರೆ.

Related posts

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

April 5, 2026
ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

April 5, 2026

2003ರ ವಿಶ್ವಕಪ್ ಟೂರ್ನಿಗೆ ಮುನ್ನ. ನಾವು ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದೇವು. ಆ ನಂತರ ಆಯ್ಕೆಗಾರರು ನನ್ನ ಗಮನಕ್ಕೆ ತರದೇ ನಿನಗೆ ನಾವು ವಿಶ್ರಾಂತಿ ನೀಡುತ್ತಿದ್ದೇವು ಎಂದು ಹೇಳಿದ್ರು. ಸಾಮಾನ್ಯವಾಗಿ ನಾವೇ ಆಯ್ಕೆ ಸಮಿತಿಯ ಮುಂದೆ ಮಾತನಾಡಿ ವಿಶ್ರಾಂತಿ ಬೇಕು ಅಂತ ಕೇಳುತ್ತಿದ್ದೇವು. ಆದ್ರೆ ಆಯ್ಕೆ ಸಮಿತಿಯ ನಿರ್ಧಾರ ನನಗೆ ಯಾಕೋ ಸರಿ ಅಂತ ಅನ್ನಿಸಲಿಲ್ಲ. ನಾನು ತುಂಬಾನೇ ಅಪ್‍ಸೆಟ್ ಆಗಿದ್ದೆ. ನನ್ನ ಬದುಕನ್ನು ಇನ್ನೊಬ್ಬರು ನಿರ್ಧಾರ ಮಾಡುವುದು ನನಗೆ ಇಷ್ಟವಿರಲಿಲ್ಲ ಅಂತ ಶ್ರೀನಾಥ್ 18 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡ್ರು.

ವೆಸ್ಟ್ ಇಂಡೀಸ್ ಸರಣಿಯ ನಂತರ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆ ಸರಣಿಗೆ ಶ್ರೀನಾಥ್ ಭಾರತ ತಂಡದಲ್ಲಿ ಇರಲಿಲ್ಲ. ಆಗ ನಾಯಕನಾಗಿದ್ದ ಸೌರವ್ ಗಂಗೂಲಿಯವರು ಶ್ರೀಗೆ ಕರೆ ಮಾಡಿ ತಂಡಕ್ಕೆ ಬರುವಂತೆ ಕೇಳಿಕೊಂಡಿದ್ದರು. ಅಪ್‍ಸೆಟ್ ಆಗಿದ್ದ ಶ್ರೀನಾಥ್ ಗಂಗೂಲಿಗೆ ಇಲ್ಲ. ಬರಲ್ಲ ಅಂತ ಹೇಳಿದ್ರಂತೆ. ಆ ನಂತರ ಗಂಗೂಲಿಯ ಒತ್ತಾಯಕ್ಕೆ ಮಣಿದು ನ್ಯೂಜಿಲೆಂಡ್ ಸರಣಿಯಲ್ಲಿ ಆಡಿದ್ರು. ಹಾಗೇ 2003ರ ವಿಶ್ವಕಪ್ ಟೂರ್ನಿಯಲ್ಲೂ ಆಡಿದ್ದರು. ವಿಶ್ವಕಪ್ ಟೂರ್ನಿಯ ನಂತರ ಶ್ರೀನಾಥ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರು. ವಿಶ್ವಕಪ್ ಟೂರ್ನಿಯ 11 ಪಂದ್ಯಗಳಲ್ಲಿ ಶ್ರೀ 16 ವಿಕೆಟ್ ಕಬಳಿಸಿದ್ದರು.

Gangulyನಾನು ಇಂಗ್ಲೆಂಡ್ ಸರಣಿಯಿಂದ ವಂಚಿತನಾದೆ. ಆಗ ಗಂಗೂಲಿ ನೀನು ತಂಡವನ್ನು ಸೇರಿಕೊಳ್ಳುವುದು ಉತ್ತಮ ಎಂದಿದ್ದರು. ಆಗ ನಾನು ಅಪ್‍ಸೆಟ್ ಆಗಿದ್ದ ಕಾರಣ ಆಗಲ್ಲ ಅಂದಿದ್ದೆ. ನನಗೆ ಕೌಂಟಿ ತಂಡಗಿಂತ ಭಾರತದ ಪರ ಆಡುವುದು ಮುಖ್ಯವಾಗಿತ್ತು. ಆ ನಂತರ ಎಲ್ಲವೂ ಸರಿ ಹೋಯ್ತು. ನನ್ನ ನಿರ್ಧಾರವನ್ನು ಬದಲಾಯಿಸಿಕೊಂಡೆ. ವಿಶ್ವಕಪ್‍ನಲ್ಲೂ ಆಡಿದ್ದೆ ಅಂತ ಶ್ರೀ ಹಳೆಯ ದಿನಗಳನ್ನು ನೆನಪಿಸಿಕೊಂಡ್ರು.
ಟೀಮ್ ಇಂಡಿಯಾದಲ್ಲಿ ನನ್ನ ಶಕ್ತಿ ಕಡಿಮೆಯಾದಾಗ ಬೇರೆಯವರಿಗೆ ಅವಕಾಶ ನೀಡಬೇಕು. ಆಗ ಯುವ ಬೌಲರ್‍ಗಳು ತಂಡಕ್ಕೆ ಸೇರ್ಪಡೆಯಾಗಿದ್ದರು. ಅವರನ್ನು ತಡೆಯುವ ಮನಸ್ಸು ನನಗೆ ಇಷ್ಟವಿರಲಿಲ್ಲ. ನನಗೆ ಸಂತೋಷವಿದೆ. ನನಗೆ ಯಾವುದೇ ರೀತಿಯ ವಿಷಾದವಿಲ್ಲ. ಘನತೆಯೊಂದಿಗೆ ಹೊರನಡೆಯುವುದು ಒಳ್ಳೆಯದ್ದು ಎಂಬುದು ನನ್ನ ಭಾವನೆಯಾಗಿತ್ತು ಅಂತಾರೆ ಜಾವಗಲ್ ಶ್ರೀನಾಥ್.

ShareTweetSendShare
Join us on:

Related Posts

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

by Shwetha
April 5, 2026
0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾ ಹಾಗೂ ವೈಯಕ್ತಿಕ ಬದುಕನ್ನು ಅತ್ಯಂತ ಸುಂದರವಾಗಿ ನಿಭಾಯಿಸುತ್ತಿದ್ದಾರೆ. ಸಿನಿಮಾಗಳಲ್ಲಿ...

ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

by Shwetha
April 5, 2026
0

ಕರ್ನಾಟಕದ ರಾಜಕಾರಣದಲ್ಲಿ ಭಾಷಾ ವಿಚಾರ ಸದಾ ಸೂಕ್ಷ್ಮ ಹಾಗೂ ಮಹತ್ವದ ಪಾತ್ರ ವಹಿಸುತ್ತದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ರಾಜ್ಯ ಕಾಂಗ್ರೆಸ್ ನಾಯಕರು...

ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಕಿಡಿ; ಹಿಂದಿ ವಿಚಾರದಲ್ಲಿ ತೀವ್ರ ಆಕ್ರೋಶ

ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಕಿಡಿ; ಹಿಂದಿ ವಿಚಾರದಲ್ಲಿ ತೀವ್ರ ಆಕ್ರೋಶ

by Shwetha
April 5, 2026
0

ರಾಜ್ಯಪಾಲ ಗೆಹೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ SSLC ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್...

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

by Shwetha
April 5, 2026
0

ರಾಜ್ಯದ ಹಲವೆಡೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ...

ದಿನ ಭವಿಷ್ಯ (04-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (05-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 5, 2026
0

ದಿನ ಭವಿಷ್ಯ: 05-04-2026 ಮೇಷ ರಾಶಿ ಇಂದಿನ ದಿನ ನಿಮಗೆ ಅತ್ಯಂತ ಉತ್ಸಾಹಭರಿತವಾಗಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಪ್ರಾಮಾಣಿಕ ಶ್ರಮಕ್ಕೆ ತಕ್ಕ ಫಲ ಮತ್ತು ಮನ್ನಣೆ ಸಿಗಲಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram