jawaharalal nehru
ಇಂದು ಸ್ವಾತಂತ್ರ ಭಾರತದ ದೇಶದ ಮೊದಲ ಪ್ರಧಾನಿಗಳಾದ ಪಂಡಿತ್ ಜವಾಹರ್ ಲಾಲ್ ನೆಹರು ಅವರ 131ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ಗಣ್ಯರು ನೆಹರು ಅವವರಿಗೆ ಗೌರವ ನಮನ ಸಲ್ಲಿಸಸಿದ್ದಾರೆ.
ಸಿಎಂ ಬಿ ಎಸ್ ಯಡಿಯೂರಪ್ಪ
‘ದೇಶದ ಪ್ರಥಮ ಪ್ರಧಾನಿ ಪಂಡಿತ್ ಶ್ರೀ ಜವಾಹರ್ ಲಾಲ್ ನೆಹರು ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಪ್ರೀತಿಯ ಶುಭಾಶಯಗಳು. ನಾಳಿನ ಭವ್ಯ ಭಾರತಕ್ಕಾಗಿ ಇಂದಿನ ಮಕ್ಕಳ ಸಮರ್ಪಕ ಪೋಷಣೆ, ರಕ್ಷಣೆ ಮತ್ತು ಶಿಕ್ಷಣ ನಮ್ಮೆಲ್ಲರ ಹೊಣೆಯಾಗಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅವರ ಸರ್ವತೋಮುಖ ಬೆಳವಣಿಗೆಗೆ ಅವಕಾಶ ಕಲ್ಪಿಸೋಣ’ ಎಂದು ತಿಳಿಸಿದ್ದಾರೆ.
ಶ್ರೀರಾಮುಲು , ಸಚಿವ
‘ ಭಾರತದ ಮೊದಲ ಪ್ರಧಾನಿ , ಪಂಡಿತ್ ಜವಹರ್ ಲಾಲ್ ನೆಹರೂ ಅವರ ಜನ್ಮದಿನದ ಗೌರವಾರ್ಥ ಆಚರಿಸಲಾಗುವ ‘ಮಕ್ಕಳ ದಿನಾಚರಣೆ’ಯ ಶುಭಾಶಯಗಳು. ಮುದ್ದು ಮಕ್ಕಳ ಮುಗ್ಧ ನಗುವಲ್ಲಿ ಚಾಚಾ ನೆಹರೂ ಎಂದೆಂದಿಗೂ ಅಮರ. ಎಂದು ನೆಹರೂ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ, ವಿರೋಧಪಕ್ಷ ನಾಯಕ
‘ಮಕ್ಕಳ ದಿನಾಚರಣೆ, ಮಾಜಿ ಪ್ರದಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳು’ ಎಂದು ಟ್ವೀಟ್ ಮಾಡಿದ್ದಾರೆ.
jawaharalal nehru
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel