ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಹಾಗೂ ಪತ್ನಿ ಪ್ರಿಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
2014 ರಲ್ಲಿ ಈ ಜೋಡಿ ಮದುವೆಯಾಗಿದ್ದರು.. ಇದೀಗ ಮಗುವಿನ ಸ್ವಾಗತಕ್ಕೆ ಸಜ್ಜಾಗುತ್ತಿದ್ದು , ಅಟ್ಲಿ ಅವರು ಈ ವಿಚಾರವನ್ನ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.. ವಿಶೇಷ ಫೋಟೋವನ್ನ ಹಂಚಿಕೊಂಡಿದ್ದು , ಅವರಿಗೆ ಅಭಿಮಾನಿಗಳು ತಾರೆಯರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಯಶಸ್ವಿ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಅಟ್ಲಿ ಥೇರಿ , ಮರ್ಸಲ್ , ಬಿಗಿಲ್ ನಂತಹ ಸೂಪರ್ ಹಿಒಟ್ ಸಿನಿಮಾಗಳನ್ನ ನಟಿಸಿದ್ದಾರೆ.. ಪ್ರಸ್ತುತ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅವರಿಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ಜವಾನ್ ಸಿನಿಮಾದಲ್ಲಿ ಅಟ್ಲಿ ಬ್ಯುಸಿಯಾಗಿದ್ದಾರೆ.. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುತ್ತಿದೆ.
ಕೃಷ್ಣ ಪ್ರಿಯಾ ಅವರನ್ನು 2014ರಲ್ಲಿ ಅಟ್ಲಿ ಮದುವೆಯಾಗಿದ್ದರು. ಅಂದ್ಹಾಗೆ ಈ ದಂಪತಿಯು ಎ ಫಾರ್ ಆಪಲ್ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.. ಎರಡು ಚಿತ್ರಗಳನ್ನು ನಿರ್ಮಿಸಿದ್ದಾರೆ. ಮದುವೆಯಾಗಿ ಎಂಟು ವರ್ಷಗಳ ನಂತರ, ಇದೀಗ ಅಟ್ಲಿ ಮತ್ತು ಪ್ರಿಯಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Jawan director Atlee and wife Krishna Priya announce pregnancy:








