ಜಯಲಲಿತಾ ನಿವಾಸ ಸ್ಮಾರಕವಲ್ಲ : ತಮಿಳುನಾಡು ಹೈಕೋರ್ಟ್ Jayalalithaa saaksha tv
ಚೆನ್ನೈ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ವೇದ ನಿಲಯಂ ಮನೆ ಸ್ಮಾರಕವಲ್ಲ ಅದನ್ನ ವಾರಸುದಾರರಿಗೆ ವರ್ಗಾಯಿಸಬೇಕು ಎಂದು ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಹಿಂದಿನ ತಮಿಳುನಾಡು ಸರ್ಕಾರ ಜಯಲಲಿತಾ ಅವರ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿತ್ತು. ಈ ತೀರ್ಪನ್ನು ಜಯಲಲಿತಾ ಅವರ ಸೋದರ ಸೊಸೆ ಮತ್ತು ಕಾನೂನು ವಾರಸುದಾರರಾದ ದೀಪಾ ಮತ್ತು ದೀಪಕ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಇದೀಗ ಮಾಜಿ ಸಿಎಂ ನಿವಾಸವನ್ನು ಸ್ವಾಧೀನಪಡಿಸಿಕೊಳ್ಳಲು ಹಿಂದಿನ ಎಐಎಡಿಎಂಕೆ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್.ಶೇಷಸಾಯಿ ಅವರು ತಳ್ಳಿ ಹಾಕಿದ್ದಾರೆ. ಜಯಲಲಿತಾ ಅವರಿಗೆ ಎರಡು ಸ್ಮಾರಕಗಳು ಏಕೆ ಇರಬೇಕು ಎಂದು ಪ್ರಶ್ನಿಸಿದ ಹೈಕೋರ್ಟ್, ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸುವ ತರ್ಕವನ್ನು ಪ್ರಶ್ನಿಸಿದೆ.
ವೇದಾ ನಿಲಯದ ಮಾಲೀಕತ್ವವನ್ನು ಪಡೆಯಲು ತಮಿಳುನಾಡು ಸರ್ಕಾರವು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ 67.9 ಕೋಟಿ ರೂ.ಗಳನ್ನ ಡೆಪಾಸಿಟ್ ಮಾಡಿತ್ತು. ಈ ಮೊತ್ತವು ಆದಾಯ ತೆರಿಗೆ ಇಲಾಖೆಗೆ ಬಾಕಿ ಇರುವ 36.9 ಕೋಟಿ ರೂ. ಪಾವತಿಸಲು
ಈ ಹಿಂದೆ ನಿವಾಸದೊಳಗಿನ ವಸ್ತುಗಳ ಪಟ್ಟಿಯನ್ನು ದಾಖಲಿಸಿ ಜಯಲಲಿತಾ ಅವರ ಕಾನೂನುಬದ್ಧ ವಾರಸುದಾರರಿಗೆ ನೀಡಬೇಕಾಗಿದ್ದರಿಂದ ನಿವಾಸದ ಕೀಗಳನ್ನು ರಿಜಿಸ್ಟ್ರಾರ್ ಜನರಲ್ ಅವರಿಗೆ ಹಸ್ತಾಂತರಿಸಲಾಗಿತ್ತು.









