Jaydev Unadkat : ವೀಸಾ ಸಮಸ್ಯೆ – ಮೊದಲ ಟೆಸ್ಟ್ ನಿಂದ ಹೊರಗುಳಿದ ಉನಾದ್ಕತ್…
ವೀಸಾ ಸಮಸ್ಯೆಯಿಂದಾಗಿ ವೇಗಿ ಜಯದೇವ್ ಉನಾದ್ಕಾಟ್ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದಾರೆ. ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನದ್ಕಾತ್ ಅವರನ್ನು ನಾಯಕ ರೋಹಿತ್ ಶರ್ಮಾ ಮತ್ತು ಮೊಹ್ಮದ್ ಶಮಿ ಅವರುಗಳ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಈಗ ವೀಸಗಾಗಿ ಕಾಯಬೇಕಿದೆ ಎಂದು ತಿಳಿದುಬಂದಿದೆ.
ವೇಗಿ ಉನಾದ್ಕತ್ ಮೊದಲ ಟೆಸ್ಟ್ ಪಂದ್ಯದ ಸಮಯಕ್ಕೆ ಆಗಮಿಸುವುದಿಲ್ಲ ಎಂದು ತಿಳಿದು ಬಂದಿತ್ತು. ವೀಸಾ ಸಮಸ್ಯೆ ಬಗೆಹರಿದಿದ್ದರೆ ಅವರ ಮೊದಲ ಟೆಸ್ಟ್ ಆಡುತ್ತಿದ್ದರು ಎಂದು ಭಾರತ ಕ್ರಿಕೆಟ್ ಮಂಡಳಿಯ ಮ್ಯಾನೇಜರ್ ತಿಳಿಸಿದ್ದಾರೆ.
2010ರಲ್ಲಿ ಜಯದೇವ್ ಉನಾದ್ಕತ್ ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದರು. ಇದೀಗ ಬಾಂಗ್ಲಾ ಸರಣಿ ಮೂಲಕ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ದೇಸಿ ಕ್ರಿಕೆಟ್ನಲ್ಲಿ 96 ಪಂದ್ಯಗಳಿಂದ 353 ವಿಕೆಟ್ ಪಡೆದಿದ್ದರು. 2019-20 ರಣಜಿಯಲ್ಲಿ ಉನಾದ್ಕತ್ ದಾಖಲೆಯ 67 ವಿಕೆಟ್ ಪಡೆದಿದ್ದರು.
ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟೂರ್ನಿಯಲ್ಲೂ 10 ಏಕದಿನ ಪಂದ್ಯಗಳಿಂದ 19 ವಿಕೆಟ್ ಪಡೆದು ಮಿಂಚಿದ್ದರು.
Jaydev Unadkat: Visa problem – Unadkat out of first test…








