ರಾಮನಗರ : ನಾನು ಉತ್ತಮರ ಸಹವಾಸ ಮಾಡಿದ್ದರೆ ಇಂದು ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ (JDS H.D.Kumaraswamy ) ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಾನು ಈ ಹಿಂದೆ ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿ ತಪ್ಪು ಮಾಡಿದ್ದೇನೆ.
ಅಷ್ಟೆ ಅಲ್ಲದೇ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತ್ತೊಮ್ಮ ಅವರೊಂದಿಗೆ ಕೈ ಜೋಡಿಸಿದ್ದು, ನನ್ನ ದೊಡ್ಡ ತಪ್ಪು.
ನಾನು ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಾಗ ಮುಳ್ಳಿನ ಮೇಲೆ ಬಟ್ಟೆ ಹಾಕಿದಂತಹ ಪರಿಸ್ಥಿತಿ ಜೆಡಿಎಸ್ ನದ್ದಾಗಿತ್ತು.
ಸದ್ಯ ಈ ತಪ್ಪುಗಳಿಂದ ಹೊರ ಬಂದು, ನಾನೇ ಅದನ್ನು ಸರಿ ಪಡಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : “ಬೈ ಎಲೆಕ್ಷನ್ ನಲ್ಲಿ `ಕೈ’ಗೆ 3ನೇ ಸ್ಥಾನ” ವಿಜಯೇಂದ್ರ ಹೇಳಿಕೆಗೆ ಡಿಕೆಶಿ ಹೇಳಿದ್ದೇನು?
ನನ್ನ ಹಳೆಯ ಸ್ನೇಹಿತರು ನನ್ನ ಕುರಿತು ಕೆಟ್ಟದ್ದಾಗಿ ಮಾತನಾಡುತ್ತಾರೆ. ಆದರೆ, ಅವರಂತೆಯೇ ನಾನು ಹಗುರವಾಗಿ ಮಾತನಾಡುವುದಿಲ್ಲ.
ನಾನು ಅವರಿಗೆ ಯಾವ ಅನ್ಯಾಯ ಮಾಡಿಲ್ಲ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು.
ಇನ್ನು ನನ್ನಿಂದ ಬೆಳೆದವರೇ ನನಗೆ ಮೋಸ ಮಾಡಿ ಚೂರಿ ಹಾಕಿ ಹೋಗಿದ್ದಾರೆ. ಇಲ್ಲಿ ನನ್ನದೇ ತಪ್ಪು ಇದೆ.
ನಾನು ಉತ್ತಮರ ಸಹವಾಸ ಮಾಡಿದ್ದರೆ ಇಂದು ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಬೇಸರ ಹೊರಹಾಕಿದ ಕುಮಾರಸ್ವಾಮಿ, ಡಿಸೆಂಬರ್ ಅಂತ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ : ನಾಳೆಯಿಂದ ಎರಡು ದಿನ ಸಿದ್ದರಾಮಯ್ಯ ಬಾದಾಮಿ ಪ್ರವಾಸ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel