ಕೋಲಾರದಲ್ಲಿ ರಮೇಶ್ ಕುಮಾರ್ ವಿರುದ್ಧ ಜೆಡಿಎಸ್ ಬೃಹತ್ ಪ್ರತಿಭಟನೆ JDS saaksha tv
ಕೋಲಾರ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕೋಲಾರದಲ್ಲಿ ಜೆಡಿಎಸ್ ಬೃಹತ್ ಶವಯಾತ್ರೆ ನಡೆಸಿದೆ.
ಅತ್ಯಾಚಾರ ಬಗ್ಗೆ ಸದನದಲ್ಲಿ ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದನ್ನ ಖಂಡಿಸಿ, ಕೋಲಾರ ನಗರದ ಎಸ್ ಎನ್ ಆರ್ ಸರ್ಕಲ್ ನಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹಾಗೂ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಹರೀಶ್ ಗೌಡ ನೇತೃತ್ವದಲ್ಲಿ ಶವಯಾತ್ರೆ ನಡೆಸಿದರು.
ರಮೇಶ್ ಕುಮಾರ್ ಅವರ ವಿರುದ್ಧ ದಿಕ್ಕಾರ ಕೂಗಿ ಬೃಹತ್ ಪ್ರತಿಭಟನೆ ನಡೆಸಿದರು.
ಸಾವಿರಾರು ಮಹಿಳೆಯರು ನಗರದ ಪ್ರಮುಖ ರಸ್ತೆ ಗಳಲ್ಲಿ ಮೆರವಣಿಗೆ ಮೂಲಕ ತೆರಳಿ ತಹಶೀಲ್ದಾರ ಅವರಲ್ಲಿ ಮನವಿ ಸಲ್ಲಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷೆ ಶ್ರೀಮತಿ ಕುರ್ಕಿ ರಾಜೇಶ್ವರಿ ಹರೀಶ್ ಗೌಡ ಅವರು, ರಮೇಶ್ ಕುಮಾರ್ ಹೇಳಿಕೆ “ಅತ್ಯಂತ ದುಃಖಕರ, ದುರದೃಷ್ಟವಾಗಿದೆ.
ದೇಶವು ಇನ್ನೂ ಸ್ತ್ರೀದ್ವೇಷ ಹೊಂದಿರುವ ಸಾರ್ವಜನಿಕ ಪ್ರತಿನಿಧಿಗಳನ್ನು ಹೊಂದಿದೆ.
ಸದನದಲ್ಲಿ ಕುಳಿತು ಈ ರೀತಿ ಹೇಳಿಕೆ ನೀಡುವುದಾದರೆ ಅವರೊಂದಿಗಿರುವ ಮಹಿಳೆಯರೊಂದಿಗೆ ಯಾವ ರೀತಿ ವರ್ತಿಸುತ್ತಾರೆ.
ಕೂಡಲೇ ರಮೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.









