ಬೆಂಗಳೂರು : ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ಕೊಟ್ಟಿರುವ ಸೋಮವಾರದ ಕರ್ನಾಟಕ ಬಂದ್ ಗೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸಿದೆ.
ಈ ಕುರಿತು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ಪ್ರತಿಕಾ ಪ್ರಕರಣೆ ಬಿಡುಗಡೆ ಮಾಡಿದ್ದಾರೆ.
ರಾಜ್ಯದ ರೈತ ಸಂಘಗಳು ಹಾಗೂ ಅನೇಕ ಸಂಘಟನೆಗಳು ಹಮ್ಮಿಕೊಂಡಿರುವ ನಾಳಿನ ರಾಜ್ಯಾದ್ಯಂತ ಬಂದ್ ಗೆ ನಮ್ಮ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿರುತ್ತದೆ.
ಇನ್ನೂ 20 ವರ್ಷ ನಿಮ್ಮನ್ನ ವಿಪಕ್ಷದಲ್ಲೇ ಕೂರಿಸುತ್ತೇನೆ : ಕಾಂಗ್ರೆಸ್ ಗೆ ಬಿಎಸ್ ವೈ ಸವಾಲ್
ಮಸೂದೆಗಳಿಗೆ ಒಪ್ಪಿಗೆ ಸಿಕ್ಕಿರುವಂತೆಯೇ ರೈತರ ಆಕ್ರೋಶವೂ ಹೆಚ್ಚಾಗಿದೆ.
ಸೋಮವಾರ ನಡೆಯಲಿರುವ ಕರ್ನಾಟಕ ಬಂದ್‍ಗೆ ರಾಜ್ಯದ ಜನ ಸಂಪೂರ್ಣ ಸಹಕಾರ ನೀಡಬೇಕು ಎಂದು ಐಕ್ಯ ಹೋರಾಟ ವೇದಿಕೆ ಮುಖಂಡರು ಮನವಿ ಮಾಡಿದ್ದಾರೆ.
ಬಂದ್‍ಗೆ ಕಬಿನಿ ರೈತ ಹಿತರಕ್ಷಣ ಸಮಿತಿ, ರಾಜ್ಯ ಕೃಷಿ ಪಂಪ್ ಸೆಟ್ ಬಳಕೆದಾರರ ಸಂಘ, ಮಹಾದಾಯಿ ನೀರು ಹೋರಾಟ ಸಮಿತಿ, ಕರ್ನಾಟಕ ರಕ್ಷಣ ವೇದಿಕೆ ಸಹಿತ ಹಲವು ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ.








