JDS : ಅಪಘಾತದಲ್ಲಿ 12 ಜೆಡಿಎಸ್ ಕಾರ್ಯಕರ್ತರಿಗೆ ಗಾಯ – ಹೆಚ್ ಡಿ ಕುಮಾರಸ್ವಾಮಿ ಭೇಟಿ
ಮಂಡ್ಯ : ಮಂಡ್ಯದಲ್ಲಿ ಸಂಭವಿಸಿರುವ ಪ್ರತ್ಯೇಕ ಅಪಘಾತಗಳಲ್ಲಿ ಜೆಡಿಎಸ್ ನ 12 ಕಾರ್ಯಕರ್ತರು ಗಾಯಗೊಂಡಿದ್ದಾರೆ.. ಒಂದು ಪ್ರಕರಣದಲ್ಲಿ ಗೂಡ್ಸ್ ಆಟೋ- ಕಾರ್ ನಡುವೆ ಡಿಕ್ಕಿ ಸಂಭವಿಸಿದೆ.. ಮತ್ತೊಂದು ಪ್ರಕರಣದಲ್ಲಿ ಬೈಕ್- ಆಟೋ ನಡುವೆ ಡಿಕ್ಕಿಯಾಗಿದೆ..
ಪ್ರತ್ಯೇಕ ಅಪಘಾತದಲ್ಲಿ 12 ಮಂದಿ ಜೆಡಿಎಸ್ ಕಾರ್ಯಕರ್ತರಿಗೆ ಗಾಯವಾಗಿದ್ದು , ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಪಂಚರತ್ನ ರಥಯಾತ್ರೆಗೆ ಬಂದು ವಾಪಸ್ಸಾಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ..
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮೂಡಲಕೊಪ್ಪಲು ಬಳಿ ಘಟನೆ ನಡೆದಿದೆ.
ನಿನ್ನೆ ರಾತ್ರಿ ನಾಗಮಂಗಲ ಟೌನ್ ನಲ್ಲಿ ನಡೆದ ಯಾತ್ರೆಗೆ ಈ ಕಾರ್ಯಕರ್ತರು ಬಂದಿದ್ದರು.
ಕಾರ್ಯಕ್ರಮ ಮುಗಿಸಿ ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಗರುಡಾಪುರದಿಂದ ಬಂದಿದ್ದ 11ಮಂದಿ, ತುಪ್ಪದಮಡು ಗ್ರಾಮದಿಂದ ಬೈಕ್ ನಲ್ಲಿ ಬಂದಿದ್ದ ಓರ್ವ ಗಾಯಗೊಂಡಿದ್ದಾರೆ.
ಕಾರ್ಯಕರ್ತರಿದ್ದ ಆಟೋಗೆ ಎದುರಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದಿಂದ ಆಟೋ ಪಲ್ಟಿಯಾಗಿ 11 ಮಂದಿಗೂ ಗಾಯವಾಗಿದೆ.
ಅದೇ ರಸ್ತೆಯಲ್ಲಿ ಬೈಕ್ ಹಾಗೂ ಆಟೋ ನಡುವೆ ಮತ್ತೊಂದು ಅಪಘಾತ ನಡೆದಿದೆ.
ಬೈಕ್ ನಲ್ಲಿ ತೆರಳುತ್ತಿದ್ದ ಆನಂದ್ ಎಂಬಾತನಿಗೆ ಗಂಭೀರ ಗಾಯವಾಗಿದೆ.
ಗಾಯಾಳುಗಳಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದ್ದು , ಗಾಯಾಳುಗಳ ಆರೋಗ್ಯ ವಿಚಾರಿಸಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.
JDS Workers get injured in Accident in mandya