JDU ಮತ್ತು RJD ಮೈತ್ರಿ ರಾಷ್ಟ್ರ ರಾಜಕಾರಣ ಮೇಲೆ ಪ್ರಭಾವ ಬೀರುವುದಿಲ್ಲ – ಪ್ರಶಾಂತ್ ಕಿಶೋರ್
2024 ರ ಲೋಕಸಭೆ ಚುನಾವಣೆಗೆ ಮುನ್ನ ಜೆಡಿಯು ಮತ್ತು ಆರ್‌ಜೆಡಿ ನಡುವಿನ ರಾಜಕೀಯ ಮೈತ್ರಿ ರಾಷ್ಟ್ರ ರಾಜಕೀಯದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಎರಡು ಬಿಹಾರದ ಪಕ್ಷಗಳು ಮೈತ್ರಿಗೆ ಮುಂದಾಗಿರುವು ಕೇವಲ ರಾಜಕೀಯ ವ್ಯವಸ್ಥೆ ಎಂದು ಪ್ರಶಾಂತ್ ಕಿಶೋರ್ ವಿವರಿಸಿದ್ದಾರೆ. ಇದು ನಿತೀಶ್ ಕುಮಾರ್ ರಾಜಕೀಯ ಮೈತ್ರಿಯ 6 ನೇ ನಿದರ್ಶನ. ರಾಜಕೀಯ ರಚನೆ ರಾಷ್ರ ರಾಜಕಾರಣದ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ. ಏಕೆಂದರೆ ಇದು ಕೇವಲ ಬಿಹಾರ ರಾಜ್ಯಕ್ಕ ಸಂಬಂಧಿಸಿದೆ ಎಂದಿದ್ದಾರೆ.
ಇದಲ್ಲದೆ, “ಈಗ, ತೇಜಸ್ವಿ ಯಾದವ್ ಮತ್ತು ನಿತೀಶ್ ಕುಮಾರ್ ಅವರು ತಮ್ಮ ಸರ್ಕಾರದ ಮೊದಲ ಕ್ಯಾಬಿನೆಟ್ ನಂತರ ಉದ್ಯೋಗಾವಕಾಶಗಳ ಭರವಸೆ ನೀಡಿದ್ದ ಜನರ ನಿರೀಕ್ಷೆಯನ್ನು ಈಡೇರಿಸುವುದು ಇಬ್ಬರಿಗೂ ಬಿಟ್ಟದ್ದು” ಎಂದು ಅವರು ಹೇಳಿದರು.
ನಿತೀಶ್ ಕುಮಾರ್ ಬಿಜೆಪಿಯಲ್ಲಿದ್ದಾಗಲೂ ದೂರವಾಗಲು ಸಾಕಷ್ಟು ಅವಕಾಶಗಳಿದ್ದವು. ಆಗವರು ಅದನ್ನು ಯಾಕೆ ಮಾಡಲಿಲ್ಲ. ಈಗ ಆರ್‌ಜೆಡಿ ಜೊತೆಗಿನ ಹೊಸ ಸರ್ಕಾರ ಹಿಂದಿನ ಸರ್ಕಾರಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು ಎಂದು ಪ್ರಶಾಂತ್ ಕಿಶೋರ್ ಟೀಕಿಸಿದ್ದಾರೆ.