ಜೆಇಇ ಪರೀಕ್ಷೆ-2021ರ ಫಲಿತಾಂಶ ಪ್ರಕಟ : ಟಾಪರ್ಸ್ ಇವರೇ..!!
ನವದೆಹಲಿ : ಐಐಟಿಯ 2021ರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ.
ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ದೆಹಲಿಯ ಐಐಟಿಯ ಮೃದುಲ್ ಅಗರ್ ವಾಲ್ 360ಕ್ಕೆ 348 ಅಂಕಗಳನ್ನು ಪಡೆಯುವ ಮೂಲಕ ಟಾಪ್ ಸ್ಥಾನ ಪಡೆದಿದ್ದಾರೆ.
ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶವನ್ನು ಅಭ್ಯರ್ಥಿಗಳು ಅಧಿಕೃತ ವೆಬ್‍ಸೈಟ್ ನಲ್ಲಿ ವೀಕ್ಷಿಸಬಹುದಾಗಿದೆ.
ಜೆಇಇ ಅಡ್ವಾನ್ಸ್ಡ್ ಫಲಿತಾಂಶದೊಂದಿಗೆ, ಐಐಟಿ ಖರಗ್‍ಪುರವು ಅಖಿಲ ಭಾರತ ಟಾಪರ್‍ಗಳ ಪಟ್ಟಿಯನ್ನು ಕೂಡ ಪ್ರಕಟಿಸಿದೆ.
ಐಐಟಿ ದೆಹಲಿಯ ಕಾವ್ಯ ಚೋಪ್ರಾ 360ಕ್ಕೆ 286 ಅಂಕಗಳನ್ನು ಪಡೆದು ಮಹಿಳೆಯರ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ.
ಇನ್ನುಳಿದಂತೆ 44 ಅಭ್ಯರ್ಥಿಗಳು ಶೇ.100 ಅಂಕಗಳನ್ನು ಗಳಿಸಿದ್ದಾರೆ. ಹಾಗೂ 18 ಮಂದಿ ಟಾಪ್ ರಾಂಕ್ ಪಡೆದಿದ್ದಾರೆ.
ಕರ್ನಾಟಕದ ಗೌರವ್ ದಾಸ್,ಬಿಹಾರದ ವೈಭವ್ ವಿಶಾಲ್, ಆಂಧ್ರಪ್ರದೇಶದ ದುಗ್ಗಿನೇನಿ ವೆಂಕಟ ಪನೀಶ್, ರಾಜಸ್ಥಾನದ ಸಿದ್ಧಾಂತ್ ಮುಖರ್ಜಿ, ಅಂಶುಲ್ ವರ್ಮಾ ಹಾಗೂ ಮೃದುಲ್ ಅಗರ್ವಾಲ್, ದೆಹಲಿಯ ರುಚಿರ್ ಬನ್ಸಾಲ್ ಹಾಗೂ ಕಾವ್ಯಾ ಚೋಪ್ರಾ, ಉತ್ತರ ಪ್ರದೇಶದ ಅಮಯ್ಯ ಸಿಂಘಾಲ್ ಹಾಗೂ ಪಾಲ್ ಅಗರ್ವಾಲ್, ತೆಲಂಗಾಣದ ಕೊಮ್ಮಾ ಶರಣ್ಯ ಮತ್ತು ಜೋಯ್ಸುಲಾ ವೆಂಕಟ ಆದಿತ್ಯ, ಆಂಧ್ರಪ್ರದೇಶದ ಪಸಾಲ ವೀರ ಶಿವ, ಕಣರ್ಂ ಲೋಕೇಶ್ ಹಾಗೂ ಕಾಂಚನಪಲ್ಲಿ ರಾಹುಲ್ ನಾಯ್ಡು, ಪಂಜಾಬ್‍ನ ಪುಲ್ಕಿತ್ ಗೋಯಲ್, ಚಂಡೀಗಢದ ಗುರಮೃತ್ ಸಿಂಗ್ ಮೊದಲ ಸ್ಥಾನ ಪಡೆದಿದ್ದಾರೆ.