4ನೇ ಹಂತದ ಜೆಇಇ ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ JEE saaksha tv
ಜೆಇಇ ಮುಖ್ಯ ಪರೀಕ್ಷೆ 2021ರ ನಾಲ್ಕನೇ ಹಂತದ ಜೆಇಇ ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆಯಾಗಿದೆ. ಪರೀಕ್ಷಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು jeemain.nta.nic.in ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಆಗಸ್ಟ್ 26, 27, 31 ಮತ್ತು ಸೆಪ್ಟೆಂಬರ್ 1, 2ರಂದು ಜೆಇಇ ಮುಖ್ಯ ಪರೀಕ್ಷೆಯ ನಾಲ್ಕನೇ ಹಂತದ ಪರೀಕ್ಷೆಗಳು ನಡೆಯಲಿವೆ. ನಾಲ್ಕನೇ ಹಂತದಲ್ಲಿ 7.3 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಅಂದಹಾಗೆ ಜೆಇಇ ಮುಖ್ಯ ಪರೀಕ್ಷೆ 2021ರ ಒಂದು ಮತ್ತು 2ನೇ ಹಂತ ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ನಡೆಸಲಾಗಿತ್ತು. ನಂತರ ಕೊರೊನಾ ಸೋಂಕು ಹೆಚ್ಚಾದ ಕಾರಣ
ಮೂರು ಮತ್ತು ನಾಲ್ಕನೇ ಹಂತದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಅದರಂತೆ ಮೂರನೇ ಹಂತದ ಪರೀಕ್ಷೆ ಜುಲೈನಲ್ಲಿ ನಡೆಸಲಾಗಿದ್ದು, ಇದೀಗ ನಾಲ್ಕನೇ ಹಂತದ ಪರೀಕ್ಷೆ ಆಗಸ್ಟ್ 26ರಿಂದ ನಡೆಯಲಿದೆ.