ಪಾದಾರ್ಪಣೆ ಪಂದ್ಯದಲ್ಲೇ ಬಾಲ್ ಬಡಿದು `ಆಸ್ಪತ್ರೆ ಸೇರಿದ ವಿಂಡೀಸ್ ಆಟಗಾರ’ jeremy-solozano saaksha tv
ಗಾಲೆ : ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಕೆರಿಬಿಯನ್ ನ ಯುವ ಆಟಗಾರ ಜೆರೆಮಿ ಸೊಲೊಝಾನೊಗೆ ಗಂಭೀರವಾದ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಂದಹಾಗೆ ಜೆರೆಮಿ ಸೊಲೊಝಾನೊಗೆ ಇದು ಮೊದಲ ಪಂದ್ಯವಾಗಿತ್ತು.
ಇಂದಿನಿಂದ ಗಾಲೆ ಅಂತರಾಷ್ಟ್ರೀಯ ಮೈದಾನದಲ್ಲಿ ಲಂಕಾ- ವಿಂಡಿಸ್ ಟೆಸ್ಟ್ ಸರಣಿ ಆರಂಭವಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ದುಕೊಂಡು ಬ್ಯಾಟಿಂಗ್ ಆರಂಭಿಸಿದೆ.
ಇನ್ನಿಂಗ್ಸ್ ನ 24ನೇ ಓವರ್ನಲ್ಲಿ ಆಫ್ ಸ್ಪಿನ್ನರ್ ರಾಸ್ಟನ್ ಚೇಸ್ ಬೌಲಿಂಗ್ನಲ್ಲಿ ಶಾರ್ಟ್ ಪಿಚ್ ಎಸೆತವನ್ನು, ಕರುಣಾರತ್ನೆ ಬಲವಾಗಿ ಬಾರಿಸಿದ್ದಾರೆ.
ಆ ಬಾಲ್ ಶಾರ್ಟ್ ಲೆಗ್ನಲ್ಲಿ ಫೀಲ್ಡ್ ಮಾಡುತ್ತಿದ್ದ ಜೆರೆಮಿ ಅವರ ತಲೆಗೆ ಬಡಿದಿದೆ. ಇದರಿಂದ ಸ್ಥಳದಲ್ಲೇ ಜೆರೆಮಿ ಕುಸಿದುಬಿದ್ದಿದ್ದಾರೆ.
ಕೂಡಲೇ ಅವರನ್ನು ಸ್ಟ್ರೆಚರ್ ಮೂಲಕ ಆಂಬುಲೆನ್ಸ್ ಗೆ ಸಾಗಿಸಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.