Jharkhand : ಬಲವಂತವಾಗಿ ಹೋಳಿ ಎರಚುವುದು ವಿರೋಧಿಸಿದಕ್ಕ ವೃದ್ಧೆ ಹತ್ಯೆ…
ಹೋಳಿ ಆಚರಣೆ ವೇಳೆ ಬಲವಂತವಾಗಿ ಬಣ್ಣ ಎರಚುವುದನ್ನ ನಿರಾಕರಿಸಿದಕ್ಕೆ ಪುಂಡ ಹುಡುಗರ ಗುಂಪೊಂದು ವೃದ್ದೆಯನ್ನ ಹೊಡೆದು ತಳಿಸಿರುವ ಘಟನೆ ಜಾರ್ಖಂಡ್‍ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ.ಮೃತಳನ್ನು ಮುಟ್ಟಿ ದೇವಿ ಎಂದು ಗುರುತಿಸಲಾಗಿದೆ. ಬಲಬದ್ಧಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋರ್ ನಿಮಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹೋಳಿ ಹಬ್ಬದ ಮುನ್ನ ದಿನವೇ ಹುಡುಗರ ಗುಂಪೊಂದು ಊರಲ್ಲಿ ಬಣ್ಣ ಎರಚುತ್ತಾ ಗಲಾಟೆ ಮಾಡುತ್ತಾ ಬಂದಿದೆ. ಕೊಲೆಯಾದ ವೃದ್ದೆಯ ಮಗನಿಗೆ ಬಣ್ಣ ಹಚ್ಚಲು ಹೋದಾಗ ಆತ ತಪ್ಪಿಸಿಕೊಂಡು ಮನೆಗೆ ಓಡಿದ್ದಾನೆ. ಮನೆ ಒಳಗೆ ಹುಡುಗರ ಗುಂಪು ನುಗ್ಗಿದಾಗ ಮುಟ್ಟಿದೇವಿ ಬಲವಂತವಾಗಿ ಬಣ್ಣ ಹಚ್ಚುವುದಕ್ಕೆ ವಿರೋಧಿಸಿದ್ದಾರೆ. ಆದರೇ ಪಾನಮತ್ತ ಯುವಕರು ವೃದ್ದೆಯ ಬಳಿ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಪ್ರಾಣ ಹೋಗುವರೆಗೂ ಥಳಿಸಿ ನಂತರ ಪರಾರಿಯಾಗಿದ್ದಾರೆ.
ಈ ಸಂಬಂಧ ಮೃತ ಮಹಿಳೆಯ ಪುತ್ರ ಮುರಾರಿ ಸಿಂಗ್ ಮಾತನಾಡಿ “ ಇದು ಯಾವುದೇ ದ್ವೇಷಕ್ಕಾಗಿ ನಡೆದ ಪ್ರಕರಣವಲ್ಲ, ನಾವು ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ. ಮದ್ಯದ ಅಮಲಿನಲ್ಲಿ ಹೋಳಿ ಆಚರಿಸುತ್ತಿದ್ದವರು ಬಲವಂತವಾಗಿ ಬಣ್ಣ ಹಚ್ಚುತ್ತಿದ್ದರು ಮತ್ತು ಜೋರಾಗಿ ಗಲಾಟೆ ಮಾಡುತ್ತಿದ್ದರು. ತಾಯಿ ಅವರ ಗೂಂಡಾಗಿರಿಯನ್ನು ವಿರೋಧಿಸಿದ್ದು, ಅವರು ಆಕೆಯ ಪ್ರಾಣ ಹೋಗುವವರೆಗೂ ಥಳಿಸಿದ್ದಾರೆ. ಇತ್ತ ತಾಯಿ ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ನಾವು ಪೊಲೀಸರಿಗೆ ಮಾಹಿತಿ ನೀಡಿದೆವು. ಆದರೆ ಪೊಲೀಸರು ಬರುವ ಮೊದಲೇ ಅವರೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು ಎಂದು ತಿಳಿಸಿದ್ದಾನೆ.
Jharkhand: An old woman who objected to forced Holi sprinkling was killed…