ಜಾರ್ಖಂಡ್‌ನ ರೋಪ್‌ವೇ ದುರಂತ್ : ರಕ್ಷಣಾ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್ ನಿಂದ ಜಾರಿಬಿದ್ದ ವ್ಯಕ್ತಿ
ಜಾರ್ಖಂಡ್‌ನ ರೋಪ್‌ವೇ ಅಪಘಾತದ ಕಾರ್ಯಾಚರಣೆಯಲ್ಲಿ ಭಾರಿ ಹಿನ್ನಡೆಯಾಗಿದೆ. ರೋಪ್ ವೇ ಕಾರಿನಿಂದ ರಕ್ಷಣೆ ಕಾರ್ಯಾಚರಣೆ ನಡೆಸುವಾಗ ವ್ಯಕ್ತಿಯೊಬ್ಬರು ಹೆಲಿಕಾಪ್ಟರ್‌ನಿಂದ ಜಾರಿಬಿದ್ದು ಸಾವನ್ನಪ್ಪಿದ್ದಾರೆ. ಇದೀಗಾ ವೈರಲ್ ಆಗಿರುವ ವೀಡಿಯೋ ಕಾರ್ಯಾಚರಣೆ ಎಷ್ಟು ಕಷ್ಟಕರವಾಗಿದೆ ಎಂಬುದನ್ನ ತೋರಿಸುತ್ತಿದೆ.
ವೀಡಿಯೋ ಕ್ಲಿಪ್‌ನಲ್ಲಿರುವ ವ್ಯಕ್ತಿ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್‌ನಿಂದ ಹಗ್ಗವನ್ನು ಹಿಡಿದು ನೇತಾಡುತ್ತಿರುವುದು ನೋಡಬಹುದು ಇನ್ನೇನು ಹೆಲಿಕಾಪ್ಟರ್ ನ್ನ ಏರಬೇಕು ಅನ್ನುವಷ್ಟರಲ್ಲಿ ಹಗ್ಗದಿಂದ ಜಾರಿ ಪ್ರಪಾತಕ್ಕೆ ಬೀಳುತ್ತಾರೆ. ಜಾರಿಬಿದ್ದ ವ್ಯಕ್ತಿಯನ್ನ ಪಶ್ಚಿಮ ಬಂಗಾಳದ ಬುರ್ದ್ವಾನ್‌ನವರು ಎಂದು ಗುರುತಿಸಲಾಗಿದೆ.
ಜಾರ್ಖಂಡ್ ರೋಪ್‌ವೇ ಅಪಘಾತದಲ್ಲಿ, ಚಾಪರ್‌ನಿಂದ ಜಾರಿ ಬಿದ್ದ ವ್ಯಕ್ತಿ ಸೇರಿ 2 ಜನರು ಸಾವನ್ನಪ್ಪಿದ್ದಾರೆ. 32 ಜನರನ್ನು ಇದುವರೆಗೆ ರಕ್ಷಿಸಲಾಗಿದೆ. ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ರೋಪ್‌ವೇ ಅಸಮರ್ಪಕ ನಿರ್ವಹಣೆಯಿಂದಾಗಿ ಪ್ರಯಾಣಿಕರು ಗಂಟೆಗಳ ಕಾಲ ಸಿಕ್ಕಿಬಿದ್ದಿದ್ದಾರೆ.
ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳ ಮೂಲಕ ಪ್ರಾಯಾಣಿಕರನ್ನ ರಕ್ಷಿಸಲಾಗುತ್ತಿದೆ. ಸುಂದರವಾದ ಮತ್ತು ದಟ್ಟವಾದ-ಕಾಡಿನ ಕಣಿವೆಯ ಮೂಲಕ ಹಾದು ಹೋಗುವ ರೋಪ್‌ವೇ ಬೆಟ್ಟಗಳಿಂದ ಆವೃತವಾಗಿದೆ, ಆಕಾಶಮಾರ್ಗವನ್ನ ಹೊರತುಪಡಿಸಿ ನೆಲದ ಮೂಲಕ ಕಾರ್ಯಾಚರಣೆಯನ್ನು ನಡೆಸುವುದು ಕಷ್ಟಕರವಾಗಿದೆ.
Jharkhand ropeway man falls from helicopter during rescue operations watch video