ಜಾರ್ಖಾಂಡ್ ನಲ್ಲಿ ರೈಲು ಹಳಿ ಸ್ಪೋಟಿಸಿದ ನಕ್ಸಲರು – ಸಂಚಾರ ಸ್ಥಗಿತ.
ಜಾರ್ಖಂಡ್-ಬಿಹಾರ ಬಂದ್ ವೇಳೆ ನಕ್ಸಲರು ರೈಲ್ವೆ ಹಳಿಗಳನ್ನ ಗುರಿಯಾಗಿಸಿಕೊಂಡು ಹಳಿ ಸ್ಪೋಟಿಸಿದ್ದಾರೆ. ಚಿಚಾಕಿ ಮತ್ತು ಕರ್ಮಬಂಧ್ ರೈಲು ನಿಲ್ದಾಣಗಳ ನಡುವೆ ನಕ್ಸಲರು ರೈಲು ಹಳಿಗಳನ್ನು ಸ್ಫೋಟಿಸಿದ್ದಾರೆ.Jharkhand | Suspected Naxals blow up a portion of railway tracks
ರೈಲು ಹಳಿಗಳ ಸ್ಪೋಟದಿಂದಾಗಿ ಹೌರಾ ಮತ್ತು ನವದೆಹಲಿ ರೈಲು ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. ರೈಲ್ವೇ ಹಳಿ ತಪ್ಪಿದ ಬಗ್ಗೆ ಮಾಹಿತಿ ಬಂದ ತಕ್ಷಣ ಪೂರ್ವ ಕೇಂದ್ರ ರೈಲ್ವೇಯ ಧನಬಾದ್ ರೈಲ್ವೆ ವಿಭಾಗೀಯ ನಿಯಂತ್ರಣ ಕಚೇರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣವೇ ರೈಲು ಸಂಚಾರವನ್ನು ನಿಲ್ಲಿಸಲಾಯಿತು.
Jharkhand | Suspected Naxals blow up a portion of railway tracks on the Howrah-New Delhi line between Chichaki and Chaudharybandh railway stations in Giridih; details awaited pic.twitter.com/9cx7GE14NK
— ANI (@ANI) January 27, 2022
ನವದೆಹಲಿ-ಹೌರಾ, ಹೊಸದಿಲ್ಲಿ-ರಾಜಧಾನಿ, ಹೊಸದಿಲ್ಲಿ-ಭುವನೇಶ್ವರ ರಾಜಧಾನಿ ಮಾರ್ಗವನ್ನು ಬದಲಿಸಲಾಗಿದೆ. ಬುಧವಾರ ರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಹಳಿ ತಪ್ಪಿದ ಬಗ್ಗೆ ಮಧ್ಯರಾತ್ರಿ 12.34ಕ್ಕೆ ರೈಲು ನಿಯಂತ್ರಣಕ್ಕೆ ಮಾಹಿತಿ ಸಿಕ್ಕಿತು.
ನಕ್ಸಲೀಯರ ಬಂದ್‌ನಿಂದಾಗಿ ರೈಲ್ವೇ ಅಲರ್ಟ್ ಮೋಡ್‌ನಲ್ಲಿದೆ. ರೈಲು ಸಂಚಾರದ ವೇಗವನ್ನ ಕಡಿಮೆ ಮಾಡಿ ಓಡಿಸಲು ಸೂಚನೆ ನೀಡಲಾಗಿದೆ.
ರೈಲು ಹಳಿ ದುರಸ್ತಿ ಮಾಡುವ ಮೂಲಕ ಗುರುವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿತು. ಗಯಾ-ಧನ್‌ಬಾದ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಅನ್ನು ಖಾಲಿ ಕೋಚ್ ಆಗಿ ಪರಿವರ್ತಿಸುವ ಮೂಲಕ ಮೊದಲ ರೈಲನ್ನು ಓಡಿಸಲಾಯಿತು. ಬೆಳಗ್ಗೆ 7.25ಕ್ಕೆ ಗೋಮೊ ನಿಲ್ದಾಣ ತಲುಪಿತು. ಹೌರಾ-ಹೊಸದಿಲ್ಲಿ ಮಾರ್ಗದಲ್ಲಿ ಧನ್‌ಬಾದ್-ಗಯಾ ನಡುವಿನ ರೈಲು ಕಾರ್ಯಾಚರಣೆ ಸುಮಾರು ಏಳು ಗಂಟೆಗಳ ಕಾಲ ಸ್ಥಗಿತಗೊಂಡಿತು.







