jhon sina
ಡಬ್ಯ್ಲುಡಬ್ಯ್ಲುಇ ನ ಸೂಪರ್ ಸ್ಟಾರ್ ಜಾನ್ ಸಿನಾ ಅವರು ಇದೀಗ ಮೂರನೇ ಬಾರಿಗೆ ಮದುವೆಯಾಗಿದ್ದಾರೆ.
ಜಾನ್ ಸಿನಾ ತಮ್ಮ ಗರ್ಲ್ ಫ್ರೆಂಡ್ ಶೇ ಶರಿಯತ್ ಜಾಡೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆದ್ರೆ ಜಾನ್ ಸಿನಾ ಮದುವೆಯ ವಿಚಾರ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಆದರೆ ಕೆಲ ಅಂರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ.
ಜಾನ್ ಸಿನಾ ಮತ್ತು ಶೇ ಶರಿಯತ್ ಜಾಡೆ ಅವರು ಸರಳವಾಗಿ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
ಶೇ ಶರಿಯತ್ ಜಾಡೆ ಸಿನಾ ಅವರಿಂಗ್ 12 ವರ್ಷ ಚಿಕ್ಕವರಾಗಿದ್ದು, ಇರಾನ್ ನಲ್ಲಿ ಜನಿಸಿದರೂ ಕೆನಡಾದ ಪೌರತ್ವ ಹೊಂದಿದ್ದಾರೆ.
ಇನ್ನೂ 31 ವರ್ಷದ ಶೇ, ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ.
ವ್ಯಾಂಕೋವರ್ ನಲ್ಲಿರುವ ಟೆಕ್ ಕಂಪನಿಯೊಂದರಲ್ಲಿ ಉತ್ಪನ್ನ ಮಟ್ಟದ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.
2019ರಲ್ಲಿ ನಡೆದ ಡಬ್ಯ್ಲುಡಬ್ಯ್ಲುಇ ತಾರೆಯರ ಚಿತ್ರೀಕರಣದ ಸಮಯದಲ್ಲಿ ಜಾನ್ ಸಿನಾ ಮತ್ತು ಶೇ ಶರಿಯತ್‍ಜಾಡೆ ಮೊದಲ ಬಾರಿಗೆ ಭೇಟಿಯಾಗಿದ್ದರು.
“ಕೆಜಿಎಫ್” ಶೂಟಿಂಗ್ ಅಖಾಡಕ್ಕೆ ಎಂಟ್ರಿ ಆಗ್ತಿದ್ದಾರೆ ‘ಅಧೀರ’ : ಸಂಜು ಬಾಬ ಹೇಳಿದ್ದೇನು..?
ಬಳಿಕ ಪರಿಚಯ ಪ್ರೀತಿಗೆ ತಿರುಗಿ ಅಂತಿಮವಾಗಿ ವಿವಾಹವಾಗಿದ್ದಾರೆ.
43 ವರ್ಷದ ಜಾನ್ ಸಿನಾ ಈಗಾಗಲೇ ಇಬ್ಬರನ್ನು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದಾರೆ.
1999ರಲ್ಲಿ ಡಬ್ಯ್ಲುಡಬ್ಯ್ಲುಇಗೆ ಪಾದಾರ್ಪಣೆ ಮಾಡಿದ ಸಿನಾ 2009ರಲ್ಲಿ ಡಬ್ಯ್ಲುಡಬ್ಯ್ಲುಇ ಲೇಡಿ ಸೂಪರ್ ಸ್ಟಾರ್ ಎಲಿಜಬೆತ್ ಹಬಡ್ರ್ಯೂ ಅವರನ್ನು ವಿವಾಹವಾಗಿದ್ದರು.
ಆದರೆ 2012ರಲ್ಲಿ ಈ ಜೋಡಿ ವಿಚ್ಛೇದನ ಪಡೆದು ಬೇರೆಯಾಗಿತ್ತು. ಇದೀಗ ಶೇ ಶರಿಯತ್ ಜಾಡೆ ಅವರನ್ನ ಮದುವೆಯಾಗಿ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
jhon sina
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








