ವರ್ಷಾಂತ್ಯಕ್ಕೆ ಜಾನ್ಸನ್ ಆಂಡ್ ಜಾನ್ಸನ್ ಲಸಿಕೆ ಭಾರತದಲ್ಲಿ ಬಳಕೆಗೆ ಲಭ್ಯ..!
ಇನ್ನೇನು ಕೊರೊನಾ 2ನೇ ಅಲೆ ತಗ್ಗಿತು ಆತಂಕ ಪಡೋ ಅಗತ್ಯ ಏನೂ ಇಲ್ಲ ಅಂತ ಜನರು ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೇ ಮತ್ತೆ ಕೋವಿಡ್ ಹಾವಳಿ ಹೆಚ್ಚಾಗತೊಡಗಿದೆ.. ದೇಶದಲ್ಲಿ ದಿನನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದೆ..
ಇದರ ಜೊತೆಗೆ ಲಸಿಕೆ ಅಭಿಯಾನವೂ ನಡೆಯುತ್ತಿದೆ..
ಅಲ್ಲದೇ ದೇಶದಲ್ಲಿ ಈವರೆಗೂ ಕೋವ್ಯಾಕ್ಸಿನ್ , ಕೋವಿಶೀಲ್ಡ್ ಸೇರಿದಂತೆ ಇತರೇ ವಿದೇಶಿ ವ್ಯಾಕ್ಸಿನ್ ಗಳ ಬಳಕೆಗೂ ಅನುಮತಿ ಸಿಕ್ಕಿದೆ.. ಅದ್ರಲ್ಲಿ ಒಂದು ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆ. ಈ ಲಸಿಕೆಯು ಈ ವರ್ಷಾಂತ್ಯದ ವೇಳೆಗೆ ಭಾರತದಲ್ಲಿ ಬಳಕೆಗೆ ಲಭ್ಯವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ..








