Jhulan Goswami : ವಿಶ್ವ ದಾಖಲೆ ಬರೆದ ಜೂಲನ್ ಗೋಸ್ವಾಮಿ..!
ಭಾರತ ಮಹಿಳಾ ತಂಡದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ವಿಶ್ವ ದಾಖಲೆ ಬರೆದಿದ್ದಾರೆ.
ಏಕದಿನ ಮಾದರಿಯಲ್ಲಿ 250 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ICC ಮಹಿಳಾ ODI ವಿಶ್ವಕಪ್-2022 ಪಂದ್ಯಾವಳಿಯ ಭಾಗವಾಗಿ ಇಂಗ್ಲೆಂಡ್ ಆರಂಭಿಕ ಆಟಗಾರ್ತಿ ಟಾಮಿ ಬ್ಯೂಮಾಂಟ್ ಅವರನ್ನು ಗೋಸ್ವಾಮಿ ಎಲ್ ಬಿ ಮಾಡಿದರು.
ಇದರಿಂದಾಗಿ ಜೂಲನ್ 250ನೇ ವಿಕೆಟ್ ಮೈಲಿಗಲ್ಲನ್ನು ತಲುಪಿದರು. ಗೋಸ್ವಾಮಿ ತನ್ನ 198 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮಹಿಳಾ ಬೌಲರ್ ಗಳ ಪೈಕಿ ಗೋಸ್ವಾಮಿ ಮೊದಲ ಸ್ಥಾನದಲ್ಲಿದ್ದಾರೆ.
ಇವರಾದ ಬಳಿಕ ಆಸ್ಟ್ರೇಲಿಯಾದ ಕ್ಯಾಥರೀನ್ ಫಿಜ್ಪ್ಯಾಟ್ರಿಕ್ (180 ವಿಕೆಟ್) ವೆಸ್ಟ್ ಇಂಡೀಸ್ ಬೌಲರ್ ಅನಿಸಾ ಮೊಹಮ್ಮದ್ (180 ವಿಕೆಟ್),
ದಕ್ಷಿಣ ಆಫ್ರಿಕಾದ ಕ್ರಿಕೆಟರ್ ಶಬ್ನಮ್ ಇಸ್ಮಾಯಿಲ್ (168 ವಿಕೆಟ್), ಇಂಗ್ಲೆಂಡ್ ಬೌಲರ್ ಕ್ಯಾಥರೀನ್ ಬ್ರಂಟ್ (164 ವಿಕೆಟ್) ಮತ್ತು ಆಸ್ಟ್ರೇಲಿಯಾದ ಬೌಲರ್ ಎಲಿಸ್ ಪೆರ್ರಿ (161 ವಿಕೆಟ್) ಇದ್ದಾರೆ.
ಜೂಲನ್ ಬೀಮೌಂಟ್ ವಿಕೆಟ್ ಪಡೆಯುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
ODIಗಳಲ್ಲಿ 250 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ ಏಳನೇ ಭಾರತೀಯ ಬೌಲರ್ (ಪುರುಷ ಮತ್ತು ಮಹಿಳಾ ಕ್ರಿಕೆಟಿಗರು).
ಅನಿಲ್ ಕುಂಬ್ಳೆ (334), ಜವಾಹರಲಾಲ್ ಶ್ರೀನಾಥ್ (315), ಅಜಿತ್ ಅಗರ್ಕರ್ (288), ಜಹೀರ್ ಖಾನ್ (269), ಹರ್ಭಜನ್ ಸಿಂಗ್ (265) ಮತ್ತು ಕಪಿಲ್ ದೇವ್ (253) ವಿಕೆಟ್ ಪಡೆದಿದ್ದಾರೆ. Jhulan Goswami Highest wicket-taker in the history









