ಜಿಂಬಾಂಬ್ವೆ…
ಆಫ್ರಿಕಾದ ಈ ಸುಂದರ ದೇಶದ ಪ್ರಾಕೃತಿಕ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ..
ಬಡ ರಾಷ್ಟ್ರಗಳಲ್ಲಿ ಒಂದೆಂದು ಈ ದೇಶವನ್ನ ಪರಿಗಣಿಸಲಾದ್ರೂ ಇಲ್ಲಿನ ಜನರು ಸದಾ ಖುಷಿಯಾಗಿಯೇ ಇರುತ್ತಾರೆ.. ಅದೇ ದೇಶದ ವಿಶೇಷತೆ..
ಇಲ್ಲಿನ ಒಟ್ಟಾರೆ ಜನಸಂಖ್ಯೆ 1.62 ಕೋಟಿ..
ಈ ದೇಶದಲ್ಲಿ 16 ಅಧಿಕೃತ ಭಾಷೆಗಳಿವೆ.. ಅತಿ ಹೆಚ್ಚು ಮಾತನಾಡಲ್ಪಡುವ ಭಾಷ ಶೋನಾ… ಈ ಭಾಷೆಯನ್ನ 70 % ಜನರು ಮಾತನಾಡ್ತಾರೆ..
ಇಲ್ಲಿನ ರಾಜಧಾನಿ : ಹರಾರೆ ( 1982 ರವರೆಗೂ ಈ ನಗರವನ್ನ ಸಾಲಿಸಸ್ಬರಿ ಎಂದೇ ಕರೆಯಲಾಗ್ತಿತ್ತು )..
ಇಲ್ಲಿ ಯಾರ ಹೊಟ್ಟೆ ದೊಡ್ಡದಿರುತ್ತೋ ಅವರನ್ನ ಧನಶಾಲಿಗಳು , ಅದೃಷ್ಟವಂತರೆಂದೇ ಪರಿಗಣಿಸಲಾಗುತ್ತದೆ.. ಹೌದು.. ಯಾರ ಹೊಟ್ಟೆ ದೊಡ್ಡದಿದ್ಯೋ ಅವರು ಧನವಂತರೆಂಬ ನಂಬಿಕೆಯಿದೆ..
ಈ ದೇಶ ಏಪ್ರಿಲ್ 18 ರಂದು ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸುತ್ತೆ..
ಬ್ರಿಟೀಶ್ ಶಾಸನದಿಂದ ಸ್ವಾತಂತ್ರ್ಯ ಪಡೆದ ಕಡೆಯ ದೇಶವೂ ಇದೇ ಆಗಿದೆ..
ಇಡೀ ವಿಶ್ವದಲ್ಲಿ ಅತಿ ಹೆಚ್ಚು ತಂಬಾಕು ಉತ್ಪಾದನೆ ಮಾಡಿ ರಫ್ತು ಮಾಡುವ ದೇಶಗಳ ಪೈಕಿ ಜಿಂಬಾಂಬ್ವೆಯೂ ಒಂದಾಗಿದೆ… ಆದ್ರೆ ಇಲ್ಲಿ ತಂಬಾಕು ಸೇವಿಸುವವರ ಸಂಖ್ಯೆ ಕೇವಲ 20 %..
ಇಲ್ಲಿನ ಜಗತ್ ಪ್ರಸಿದ್ಧ ವಿಕ್ಟೋರಿಯಾ ಫಾಲ್ಸ್ ಎಂತಹವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತೆ..
ಇಡೀ ವಿಶ್ವದಲ್ಲಿ ಅತಿ ದೊಡ್ಡ ಮಾನವ ನಿರ್ಮಿತ ಲೇಕ್ ಗಳ ಪೈಕಿ ಒಂದಾಗಿರುವ ಲೇಕ್ ಕರೀಬಾ ಕೂಡ ಇದೇ ದೇಶದಲ್ಲಿಯೇ ಇದೆ..
ಈ ದೇಶದಲ್ಲಿ ವಿವಿಧ ಸಂಸ್ಕ್ರತಿಗಳು ಪ್ರವಾಸಿಗರನ್ನ ಸೆಳೆಯುತ್ತೆ..










