ಚೀನಾ ಆರ್ಥಿಕತೆಯನ್ನು ಪ್ರಪಾತಕ್ಕೆ ದೂಡಿದ ಜಿನ್ ಪಿಂಗ್
ಬೀಜಿಂಗ್, ಜುಲೈ 7: ಚೀನಾ ಆರ್ಥಿಕ ಹೊಡೆತಕ್ಕೆ ಸಿಲುಕಿ ಅಕ್ಷರಶಃ ಕುಗ್ಗಿ ಹೋಗಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಅರ್ಥಿಕ ನಿರ್ಬಂಧಗಳನ್ನು ಹೇರಿದ ಪರಿಣಾಮ ಮತ್ತು ಕೊರೊನಾ ಸೋಂಕಿನಿಂದ ಉಂಟಾದ ಬಿಕ್ಕಟ್ಟಿನಿಂದ ಚೀನಾ ಅರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಇದೀಗ ಡ್ರಾಗನ್ ರಾಷ್ಟ್ರದಲ್ಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆಡಳಿತದಲ್ಲಿ ಅಪಸ್ವರ ಎದ್ದಿದ್ದು, ಆರ್ಥಿಕ ಹೊಡೆತಕ್ಕೆ ಕಮ್ಯುನಿಸ್ಟ್ ರಾಷ್ಟ್ರ ಕಂಗಾಲಾಗಿದೆ.
ಚೀನಾ ಅಪಾರ ಪ್ರಮಾಣದಲ್ಲಿ ವಿವಿಧ ದೇಶಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೂಡಿಕೆಗೆ ಸಾಲ ಕೊಡಲೆಂದು ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ ಎಂಬ ಯೋಜನೆ ರೂಪಿಸಿದ್ದು, ಕೊರೊನಾ ಬಿಕ್ಕಟ್ಟಿನಿಂದ ಅನೇಕ ರಾಷ್ಟ್ರಗಳು ಸಾಲ ಮರು ಪಾವತಿ ಮುಂದೂಡಿವೆ.
ಗಾಲ್ವಾನ್ ಕಣಿವೆ ಸಂಘರ್ಷದ ಹಿನ್ನಲೆಯಲ್ಲಿ ಭಾರತ ಚೀನಾ ವಸ್ತುಗಳ ಅಮದಿಗೆ ಹೊಡೆತ ನೀಡಿದೆ. ಅಷ್ಟೇ ಅಲ್ಲ ಆಸ್ಟ್ರೇಲಿಯಾ ಕೂಡ ಅಮದು ವ್ಯವಹಾರವನ್ನು ನಿಲ್ಲಿಸಿದೆ. ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳು ಚೀನಾವನ್ನು ದೂರವಿರಿಸಿದ್ದು, ವ್ಯಾಸಂಗಕ್ಕೆ ಬರುವ ಚೀನಾದ ವಿದ್ಯಾರ್ಥಿಗಳಿಗೆ ಕೂಡ ಪ್ರವೇಶ ನಿರಾಕರಿಸಿದೆ. ಈ ಎಲ್ಲಾ ಕಾರಣದಿಂದ ಕಮ್ಯುನಿಸ್ಟ್ ರಾಷ್ಟ್ರ ಕುಗ್ಗಿದ್ದು, ಅರ್ಥಿಕ ಬಿಕ್ಕಟ್ಟಿನ ಪ್ರಪಾತಕ್ಕೆ ಬಿದ್ದಿದೆ








