ರಿಲಾಯನ್ಸ್ ಜಿಯೋ (Reliance Jio) ಸಂಸ್ಥೆಯಿಂದ ಗಣೇಶ ಚತುರ್ಥಿ ದಿನದಂದು ಜಿಯೋ ಏರ್ಫೈಬರ್ (Jio AirFiber) ಸೇವೆ ಅನಾವರಣಗೊಳಿಸಿದೆ.
ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಜಿಯೋ ತನ್ನ ಏರ್ಫೈಬರ್ ಸೇವೆ ಆರಂಭಿಸಲಾಗಿದೆ. ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತಾ, ಮುಂಬೈ ಮತ್ತು ಪುಣೆಗಳಲ್ಲಿ ಸದ್ಯಕ್ಕೆ ಜಿಯೋ ಏರ್ಫೈಬರ್ ಲಭ್ಯವಾಗಿವೆ. ತಿಂಗಳಿಗೆ 599 ರೂನಿಂದ ಪ್ರಾರಂಭವಾಗಿ 3,999 ರೂವರೆಗೂ ವಿವಿಧ ಪ್ಲಾನ್ಗಳನ್ನು ಇದು ಒಳಗೊಂಡಿದೆ.
ವೈರ್ಲೆಸ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆ. ಗಾಳಿ ಮೂಲಕ ಇಂಟರ್ನೆಟ್ ಕನೆಕ್ಟಿವಿಟಿ ಪಡೆಯಬಹುದು.1 ಜಿಬಿಯವರೆಗಿನ ಇಂಟರ್ನೆಟ್ ವೇಗ ಇರುತ್ತದೆ. ಜಿಯೋ ಏರ್ ಫೈಬರ್ ನಲ್ಲಿ ಉತ್ತಮ ಇಂಟರ್ನೆಟ್ ಸ್ಪೀಡ್ ಜೊತೆಗೆ 550ಕ್ಕೂ ಹೆಚ್ಚು ಡಿಜಿಟಲ್ ಚಾನಲ್ಸ್, 14ಕ್ಕೂ ಹೆಚ್ಚು ಒಟಿಟಿ ಆ್ಯಪ್ಗಳು ಸಿಗುತ್ತವೆ.