ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್ : ಇನ್ಮೇಲೆ ಡೇಟಾ ಖಾಲಿ ಆದ್ರೂ ಚಿಂತೆ ಇಲ್ಲ
ಮುಂಬೈ : ಸದಾ ಒಂದಿಲ್ಲೊಂದು ಆಫರ್ ಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಜಿಯೋ ಇದೀಗ ತನ್ನ ಗ್ರಾಹಕರಿಗೆ ತುರ್ತು ಡೇಟಾ ಸಾಲ ಸೌಲಭ್ಯವನ್ನು ಘೋಷಿಸಿದೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜಿಯೋ, ತನ್ನ ಚಂದಾದಾರರಿಗೆ ಡೇಟಾ ಖಾಲಿಯಾದ ತಕ್ಷಣವೇ ತ್ವರಿತವಾಗಿ ಡೇಟಾ ಸಾಲ ಪಡೆಯಲು ತುರ್ತು ಡೇಟಾ ಸಾಲ ಸೌಲಭ್ಯ ಪ್ರಾರಂಭಿಸಿದೆ.
ಜಿಯೋ ಚಂದಾದಾರರು ತಮ್ಮ ದೈನಂದಿನ ಡೇಟಾ ಪ್ಯಾಕ್ ಖಾಲಿಯಾದಲ್ಲಿ, ತುರ್ತು ಡೇಟಾ ಸಾಲ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದು. ಈಗ ರೀಚಾರ್ಜ್ ಮಾಡಿ ಮತ್ತು ನಂತರ ಪಾವತಿಸಿ ಎಂಬ ಆಪ್ಷನ್ ಇದರಲ್ಲಿ ಇರಲಿದೆ.
ಇನ್ನು ತುರ್ತು ಡೇಟಾ ಸಾಲ ಸೌಲಭ್ಯವನ್ನು ಪಡೆಯುವ ವಿಧಾನ ಹೀಗಿದೆ.
ಮೊದಲು ಮೈಜಿಯೋ ಆಪ್ ತೆರೆದು ಮೆನು ಆಪ್ಷನ್ ಕ್ಲಿಕ್ ಮಾಡಿ
ನಂತರ ಅದರಲ್ಲಿ ‘ಎಮರ್ಜೆನ್ಸಿ ಡೇಟಾ ಲೋನ್’ ಆಪ್ಷನ್ ಸೆಲೆಕ್ಟ್ ಮಾಡಿ
ಬಳಿಕ ‘ಎಮರ್ಜೆನ್ಸಿ ಡೇಟಾ ಲೋನ್’ ನಲ್ಲಿ ಪ್ರೊಡ್ಯೂಸ್ ಎಂಬ ಆಯ್ಕೆ ಮಾಡಿ ಕ್ಲಿಕ್ ಮಾಡಿ
ಇದಾದ ಬಳಿಕ ಗೆಟ್ ಎಮರ್ಜೆನ್ಸಿ ಡೇಟಾ ಅನ್ನು ಆಯ್ಕೆ ಮಾಡಿ