ಸೆಪ್ಟೆಂಬರ್ ವೇಳೆಗೆ ಮಾರುಕಟ್ಟೆಗೆ ಎಂಟ್ರಿಕೊಡಲಿದೆ ಜಿಯೋಫೋನ್ ನೆಕ್ಸ್ಟ್
ರಿಲಯನ್ಸ್ ಜಿಯೋ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್ ಫೋನ್ ನನ್ನು ಘೋಷಣೆ ಮಾಡಿದ್ದು, ಜೀಯೋ ಸಂಸ್ಥೆ ಘೋಷಣೆ ಮಾಡಿದ ಸ್ಮಾರ್ಟ್ ಫೋನ್ ಸಪ್ಟೆಂಬರ್ ನಲ್ಲಿ ಕೈಗೆ ಸಿಗಲಿದೆ ಎಂದು ಸಂಸ್ತೆ ಹೇಳಿದೆ. ಗೂಗಲ್ ಸಂಸ್ಥೆಯೊಂದಿಗೆ ಭಾಗಿಯಾಗಿ ರಿಲಯನ್ಸ್ ಜಿಯೋ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್ ಫೋನ್ ನನ್ನು ಅಭಿವೃದ್ಧಿ ಪಡಿಸಿದೆ. ಆಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಆಗಿದ್ದು, ಪ್ಲೇ ಸ್ಟೋರ್ ಗೆ ಸಂಪೂರ್ಣ ಪ್ರವೇಶವನ್ನು ನೀಡುತ್ತದೆ. ಇದರ ಮೂಲಕ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ.
ಈ ಬಗ್ಗೆ ಮಾತನಾಡಿರುವ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ, ಕೈಗೆಟಕುವ 4ಜಿ ಸ್ಮಾರ್ಟ್ ಫೋನ್ ಸಹಾಯದಿಂದ 300 ಮಿಲಿಯನ್ 2ಜಿ ಬಳಕೆದಾರರನ್ನ 4ಜಿಗೆ ಅಪ್ ಗ್ರೇಡ್ ಮಾಡುವ ಗುರಿಯನ್ನು ಹೊಂದಿದೆ. ಚಂದಾದಾರರ ಹೆಚ್ಚಳವೂ ಇದರ ಮುಖ್ಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಬಳಕದಾರರ ಸಂಖ್ಯೆ ಹೆಚ್ಚಳ ಮಾಡುವುದಕ್ಕೆ ಸಂಸ್ಥೆ ಗಮನ ನೀಡುತ್ತದೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಸೆಪ್ಟೆಂಬರ್ 1 0ರಿಂದ ಜಿಯೋ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎನ್ನಲಾಗಿದೆ.








