ಕಳೆದ ವರ್ಷ ಭಾರತ ಸರಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಇದರಿಂದ ಕೆಲವು ಪಾಕ್ ಹಿತಾಶಕ್ತಿಗಳು ಸರಕಾರದ ನಿಲುವನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದವು. ಇದೀಗ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರ ವನ್ನು ಮುಂದಿನ ಪೀಠಕ್ಕೆ ವರ್ಗಾವಣೆ ಮಾಡಬೇಕೆ ಅನ್ನುವ ನಿರ್ಧಾರವನ್ನು ಪಂಚ ಪೀಠ ಇಂದು ಸೋಮವಾರ ತೀರ್ಮಾನಿಸಲಿದೆ.
ಈಗಾಗಲೇ ಕೇಂದ್ರ ಸರಕಾರ 370 ನೇ ರದ್ದತಿ ಜಮ್ಮು ಕಾಶ್ಮೀರವನ್ನು ದೇಶದ ಕೇಂದ್ರಾಡಳಿತಕ್ಕೆ ಸೇರಿಸಲು ನೆರವಾಗಿದೆ ಮತ್ತು ಈ ನಿರ್ಧಾರವನ್ನು ಬದಲಾಯಿಸಲು ಅಸಾಧ್ಯ ಎಂದು ಕಡ್ಡಿ ಮುರಿದಂತೆ ಹೇಳಿತ್ತು.
ಅರ್ಜಿದಾರರಲ್ಲಿ ಒಬ್ಬರಾದ ಡಾ . ರಾಜೀವ್ ಧವನ್ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿಯೇ ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮೊಟಕುಗೊಳಿಸಿ ಕೇಂದ್ರಾಡಳಿತವಾಗಿ ರೂಪಿಸಿದ್ದಾರೆ ಎಂದು ಆಪಾದಿಸಿದರು. ಈಗಾಗಲೇ ಅನೇಕ ಅರ್ಜಿಗಳು ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಸಲ್ಲಿಸಲಾಗಿದೆ.
ಸುಪ್ರೀಂ ಕೋರ್ಟ್ ಈಗಾಗಲೇ ಸರಕಾರ ನಿರ್ಧಾರದ ರದ್ದತಿಗೆ ತಡೆಯಾಜ್ಞೆ ನೀಡಬೇಕೆನ್ನುವ ಅರ್ಜಿಯನ್ನು ತಿರಸ್ಕರಿಸಿದ್ದು, ಇದೀಗ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವವನ್ನು ಕೈಗೆತ್ತಿಕೊಳ್ಳಲಿದೆ.








