ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೆ ಉಗ್ರರ ದಾಳಿ – ಬೈಡೆನ್ ಎಚ್ಚರಿಕೆ
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನಡುವೆ ಭಾರತ , ಅಮೆರಿಕಾ ಸೇರಿದಂತೆ ಹಲವಾರು ರಾಷ್ಟ್ರಗಳು ಅಫ್ಗಾನ್ ನಿಂದ ನಾಗರಿಕರ ಸ್ಥಳಾಂತರದಲ್ಲಿ ತೊಡಗಿವೆ. ಇದೇ ಸ್ಥಳಾಂತರ ಸಂದರ್ಭದಲ್ಲಿ ಕಾಬುಲ್ ವಿಮಾನ ನಿಲ್ದಾಣದಲ್ಲಿ ಉಗ್ರರು ನಡೆಸಿದ ಸರಣಿ ಬಾಂಬ್ ದಾಳಿಯಲ್ಲಿ 13 ಕ್ಕೂ ಹೆಚ್ಚು ಅಮೆರಿಕಾದ ಸೈನಿಕರು ಸೇರಿದಂತೆ 100 ಕ್ಕೂ ಹೆಚ್ಚು ಜನ ಮೃತಪಟ್ಟಿದ್ರೆ ಅನೇಕರು ಗಾಯಗೊಂಡಿದ್ದರು.. ಇದಾದ ಬಳಿಕ ಪ್ರತೀಕಾರದ ಪ್ರತಿಜ್ಞೆ ಮಾಡಿದ್ದರು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು. ಅದ್ರಂತೆ ಅಮೆರಿಕಾವು ಏರ್ ಸ್ಟ್ರೈಕ್ ನಡೆಸಿತ್ತು.
ಇದೀಗ ಈ ಬಗ್ಗೆ ಮಾತನಾಡಿರುವ ಜೋ ಬೈಡೆನ್ ಮುಂದಿನ 24ರಿಂದ 36 ಗಂಟೆಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಉಗ್ರರು ಮತ್ತೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಫ್ಗಾನಿಸ್ತಾನದಿಂದ ಇದೇ 31ರೊಳಗೆ ತನ್ನ ಪ್ರಜೆಗಳನ್ನು ಕರೆತರುವ ಕಾರ್ಯಕ್ಕೆ ಗಡುವು ಸಮೀಪಿಸುತ್ತಿರುವಂತೆಯೇ ಅಮೆರಿಕ ತೆರವು ಕಾರ್ಯಾಚರಣೆಯನ್ನು ಬಿರುಸುಗೊಳಿಸಿದೆ. ದಾಳಿ ಬೆದರಿಕೆ ಇರುವ ಕಾರಣ ಅಮೆರಿಕ ಪ್ರಜೆಗಳು ವಿಮಾನನಿಲ್ದಾಣದ ಬಳಿ ಸುಳಿಯಬಾರದು ಎಂದು ವಿದೇಶಾಂಗ ಇಲಾಖೆ ಕೂಡ ಎಚ್ಚರಿಸಿದೆ.
ಅಫ್ಗಾನ್ ನಲ್ಲಿ ಊಟಕ್ಕೆ ಹಾಹಾಕಾರ , ಹಣವಿಲ್ಲದೇ ಪರದಾಟ – ATM ಗಳೆದುರು ಜನ ಸಾಗರ..!
ಇತ್ತ ಕ್ಷಣಕ್ಷಣಕ್ಕೂ ಕಾಬುಲ್ ವಿಮಾನ ನಿಲ್ದಾಣದಲ್ಲಿ ದಾಳಿಯ ಆತಂಕ ಹೆಚ್ಚಾಗ್ತಿದೆ.. ಪರಿಸ್ಥಿತಿ ಹದಗೆಡುತ್ತಿದೆ.. ಒಂದು ಪ್ಲೇಟ್ ರೈಸ್ ಗೆ 7,500 , ಒಂದು ಬಾಟೆಲ್ ನೀರಿಗೆ 3,000 ಕೊಡಬೇಕಾದ ಸ್ಥಿತಿ ಅಲ್ಲಿನ ಜನರಿಗೆ ಬಮದೊದಗಿದೆ. ಈ ನಡುವೆ ಜನರು ಈಗ ಹಣಕ್ಕಾಗಿ ಪರದಾಡುವಂತೆ ಆಗಿದೆ. ಮೂರು ದಿನಗಳ ಹಿಂದೆಯಷ್ಟೇ ಬ್ಯಾಂಕ್ ವಹಿವಾಟು ಪ್ರಾರಂಭವಾಗಿದ್ದು, ಇದರ ಮಧ್ಯೆ ನ್ಯೂ ಕಾಬೂಲ್ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಇತರೆ ಸರ್ಕಾರಿ ಉದ್ಯೋಗಿಗಳು ತಮ್ಮ ಐದಾರು ತಿಂಗಳ ವೇತನ ನೀಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ.
ಜನರು ಎಟಿಎಂ ಮುಂದೆ ಕ್ಯೂ ನಿಂತು ಹಣವಿಲ್ಲದೇ ಒದ್ದಾಡುವಂತಾಗಿದೆ. ಕೆಲವು ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದರೂ, ಸಹ ಅವುಗಳಲ್ಲಿ ದಿನಕ್ಕೆ 200 ಡಾಲರ್ ಅಷ್ಟೇ ಹಣ ತೆಗೆಯಲು ಸಾಧ್ಯವಾಗುತ್ತಿದೆ. ಈ ಕಾರಣಕ್ಕೆ ಎಟಿಎಂ ಮುಂದೆ ಜನರ ಕ್ಯೂ ನಿಂತಿದ್ದಾರೆ. ಇನ್ನೂ ಪಾಕಿಸ್ತಾನ ಚೈನಾ ತಾಲಿಬಾನಿಗಳಿಗೆ ಬೆಂಬಲಿಸಿದ್ದು, ಭಾರತದ ವಿರುದ್ಧ ಮುಗಿಬೀಳುವ ತಂತ್ರ ಹೊಂದಿರುವುದಾಗಿ ತಿಳಿದುಬಂದಿತ್ತು. ಸಾಲದಕ್ಕೆ ಪಾಕ್ ಕಾಶ್ಮೀರವನ್ನ ತಾಲಿಬಾನಿಗಳ ಸಹಾಯದಿಂದ ಕಿತ್ತುಕೊಳ್ಳಲಿದೆ ಎಂದು ಲೈವ್ ಡಿಬೇಟ್ ನಲ್ಲಿ ಪಾಕ್ ಆಡಳಿತ ಪಕ್ಷದ ಮುಖಂಡೆ ಬಾಯಿ ಬಡೆದುಕೊಂಡಿದ್ದರು..
ಭಾರತಕ್ಕೆ ತಾಲಿಬಾನಿಗಳಿಂದ ಕೆಡುಕಾಗುವ ಅನುಮಾನವಿರುವ ಬೆನ್ನಲ್ಲೇ ಇದೀಗ ತಾಲಿಬಾನ್ ನ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್ , ಭಾರತದೊಂದಿಗೆ ಉತ್ತಮ ಬಾಂಧವ್ಯಕ್ಕಾಗಿ ಕರೆ ನೀಡಿದ್ದಾರೆ. ಕಾಬೂಲ್ ಪತನದ ನಂತರ ಭಾಷಣದಲ್ಲಿ ತಾಲಿಬಾನ್ ನಾಯಕ ಮೊದಲ ಬಾರಿಗೆ ಮಾತನಾಡಿ ಭಾರತದ ಬಗ್ಗೆಯೂ ಪ್ರಸ್ತಾಪಿಸಿದ್ದಲ್ಲದೇ ಉತ್ತಮ ಸಂಬಂಧ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ.








