ಕಾಬುಲ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ – 13 ಅಮೆರಿಕಾ ಯೋಧರು ಸೇರಿ 72 ಸಾವು – ಸೇಡು ತೀರಿಸಿಕೊಳ್ಳುವುದಾಗಿ ಬೈಡೆನ್ ಪ್ರತಿಜ್ಞೆ..!
ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿರುವ ಕಾಬುಲ್ ವಿಮಾನ ನಿಲ್ದಾಣದಲ್ಲಿ ದಾಳಿಯಾಗುವುದಾಗಿ ಇತ್ತೀಚೆಗೆ ಇಂಗ್ಲೆಂಡ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಇದೀಗ ದಾಳಿಯಾಗಿದೆ. ಆತ್ಮಹತ್ಯಾ ಬಾಂಬ್ ದಾಳಿಗೆ 13 ಮಂದಿ ಅಮೆರಿಕಾ ಯೋಧರು, ನಾಗರಿಕರೂ ಸೇರಿದಂತೆ 72 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇನ್ನೂ ಈ ಘಟನೆ ಬಗ್ಗೆ ಆಕ್ರೋಶ ಹೊರಹಾಕಿರುವ ಅಮೆರಿಕಾಅಧ್ಯಕ್ಷಜೋ ಬೈಡೆನ್ ಅವರು ಈ ಸಾವುಗಳಿಗೆ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ ಹಮೀದ್ ಕರ್ಜೈ ವಿಮಾನ ನಿಲ್ದಾಣದಲ್ಲಿ ಮಾರಣಾಂತಿಕ ಆತ್ಮಾಹುತಿ ಬಾಂಬ್ ದಾಳಿಯ ಹೊರತಾಗಿಯೂ ಅಫ್ಗಾನಿಸ್ತಾನದಿಂದ ಅಮೆರಿಕದ ನಾಗರಿಕರು ಮತ್ತು ಇತರರ ಸ್ಥಳಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.
ಇನ್ನೂ ಈ ಸಾವುಗಳಿಗೆ ಸೇಡು ತೀರಿಸಿಕೊಳ್ಳುತ್ತೇವೆ. ಉಗ್ರರನ್ನ ಅಟ್ಟಾಡಿಸಿಕೊಂಡು ಬೇಟೆಯಾಡ್ತೇವೆ. ದಾಳಿ ನಡೆಸಿರುವ ಉಗ್ರರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಶ್ವೇತಭವನದಲ್ಲಿ ಮಾಡಿದ ಭಾವನಾತ್ಮಕ ಭಾಷಣದಲ್ಲಿ ಬೈಡೆನ್ ಶಪತ ಮಾಡಿದ್ದಾರೆ. 13 ಮಂದಿ ಅಮೆರಿಕದ ಯೋಧರು ಮತ್ತು 60ಕ್ಕೂ ಹೆಚ್ಚು ಅಫ್ಗಾನ್ ನಾಗರಿಕರನ್ನು ಕೊಂದ ಸರಣಿ ಬಾಂಬ್ ದಾಳಿಗಳಿಗೆ ಇಸ್ಲಾಮಿಕ್ ಸ್ಟೇಟ್ ಗುಂಪಿನ ಅಫ್ಗಾನಿಸ್ತಾನದ ಅಂಗಸಂಸ್ಥೆಯೇ ಕಾರಣ ಎಂದು ಅವರು ಹೇಳಿದ್ದಾರೆ.
ಇನ್ನೂ ದಾಳಿ ನಡೆಸಿದವರು ಯಾರೆಂದು ನಮಗೆ ತಿಳಿದಿದೆ. ಆ ನಿರ್ಧಾರಕ್ಕೆ ಬರಲು ನಮಗೆ ಕೆಲವು ಕಾರಣಗಳಿವೆ. ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ನಾವು ಅವರನ್ನು ಬೇಟೆಯಾಡದೆ ಬಿಡುವುದಿಲ್ಲ ಎಂದು ಸ್ಥಳಾಂತರ ಪ್ರಕ್ರಿಯೆಯೆ ಮೇಲ್ವಿಚಾರಣೆ ಮಾಡುತ್ತಿರುವ ಅಮೆರಿಕದ ಜನರಲ್ ಫ್ರಾಂಕ್ ಮೆಕೆಂಜಿ ಹೇಳಿದ್ದಾರೆ.
ಅಮೆರಿಕ ಬೆಂಬಲಿತ ಅಫ್ಗಾನ್ ಸರ್ಕಾರ ಪತನಗೊಂಡು, ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ಅಫ್ಗಾನಿಸ್ತಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತಂತೆ ಅಮೆರಿಕದ ಬೈಡನ್ ನೇತೃತ್ವದ ಆಡಳಿತದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ. ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..