ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೆ ಮತ್ತೆ ಸೇರ್ಪಡೆಗೊಳ್ಳಲಿದೆ – ಜೋ ಬಿಡನ್ Joe Biden rejoin who
ವಾಷಿಂಗ್ಟನ್, ನವೆಂಬರ್21: ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬಿಡನ್ ಅವರು ಚೀನಾ ನಿಯಮಾವಳಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದನ್ನು ಬಯಸಿರುವುದಾಗಿ ಹೇಳಿದ್ದಾರೆ ಮತ್ತು ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್ಒ) ಮತ್ತೆ ಸೇರ್ಪಡೆಗೊಳ್ಳಲಿದೆ ಎಂದು ಘೋಷಿಸಿದ್ದಾರೆ. Joe Biden rejoin who
ಚುನಾವಣಾ ಪ್ರಚಾರದ ಸಮಯದಲ್ಲಿ, ಬಿಡೆನ್ ಅವರು ಚೀನಾಕ್ಕೆ ಶಿಕ್ಷೆ ವಿಧಿಸಲು ಬಯಸಿದ್ದರು. ಬಿಡೆನ್ ಅವರನ್ನು ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಳಲಾಯಿತು. ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಮೇಲೆ ಆರ್ಥಿಕ ನಿಷೇಧ ಹೇರಲಾಗುತ್ತದೆಯೇ ಅಥವಾ ಆಮದು ಅಥವಾ ರಫ್ತು ಮೇಲಿನ ತೆರಿಗೆ ಹೆಚ್ಚಳವಾಗುತ್ತದೆಯೇ ಎಂದು ಅವರನ್ನು ಪ್ರಶ್ನಿಸಲಾಯಿತು.
ಈ ವರ್ಷದ ಏಪ್ರಿಲ್ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹಿಂದೆ ಸರಿಯುವುದಾಗಿ ಘೋಷಿಸಿದರು. ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಹರಡಲು ಆರಂಭವಾದಾಗ ಅದರ ಅಪಾಯವನ್ನು ಗ್ರಹಿಸುವಲ್ಲಿ ವಿಶ್ವ ಸಂಸ್ಥೆಯ ಭಾಗವಾದ ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದರು.
ಕೋವಿಡ್-19 ಎರಡನೇ ಅಲೆ – ಪಾಕಿಸ್ತಾನ ಸೇರಿದಂತೆ 12 ದೇಶಗಳ ವೀಸಾಗಳ ವಿತರಣೆ ತಾತ್ಕಾಲಿಕ ಸ್ಥಗಿತ
ಚೀನಾವನ್ನು ಶಿಕ್ಷಿಸುವುದು ಪ್ರಮುಖವಲ್ಲ, ಆದರೆ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ಚೀನಾ ಅರ್ಥಮಾಡಿಕೊಂಡಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕಿದೆ ಎಂದು ಬಿಡೆನ್ ಹೇಳಿದರು.
ಅವರು ತಮ್ಮ ತವರು ಪಟ್ಟಣ ವಿಲ್ಮಿಂಗ್ಟನ್ನಲ್ಲಿರುವ ತಮ್ಮ ನಿವಾಸದಲ್ಲಿ ಉಭಯಪಕ್ಷೀಯ ಗವರ್ನರ್ಗಳ ಸಭೆ ನಡೆಸಿ ಮಾತನಾಡಿದರು. ಅವರ ಆಡಳಿತವು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮತ್ತೆ ಸೇರಲು ಇದೂ ಒಂದು ಕಾರಣ ಎಂದು ಅವರು ಹೇಳಿದರು.
ತನ್ನ ಆಡಳಿತವು ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೆ ಮತ್ತೆ ಸೇರಲು ಹೊರಟಿದೆ ಮತ್ತು ಸುಧಾರಣೆಯ ಅಗತ್ಯವಿದೆ ಎಂದು ಬಿಡೆನ್ ಹೇಳಿದರು. ನಾವು ಮತ್ತೆ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸೇರಬೇಕಾಗಿದೆ.
ಚೀನಾ ಅರ್ಥಮಾಡಿಕೊಳ್ಳಬೇಕಾದ ಕೆಲವು ನಿಯಮಗಳಿವೆ ಎಂದು ನಾವು ಅವರಿಗೆ ಮನವರಿಕೆ ಮಾಡಬೇಕಿದೆ ಎಂದ ಬಿಡೆನ್ ಅಧ್ಯಕ್ಷ ಟ್ರಂಪ್ ಅವರ ನಾಲ್ಕು ವರ್ಷಗಳ ಅವಧಿ ಯುಎಸ್-ಚೀನಾ ಸಂಬಂಧಗಳಿಗೆ ಅತ್ಯಂತ ಕೆಟ್ಟ ಅವಧಿಯಾಗಿತ್ತು ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಸೂರ್ಯನ ಬೆಳಕಿನ 7 ಸೂಪರ್ ಸೀಕ್ರೆಟ್ ಆರೋಗ್ಯ ಪ್ರಯೋಜನಗಳು https://t.co/vNF9KldJfl
— Saaksha TV (@SaakshaTv) November 20, 2020
ಪಾಕ್ ಭಯೋತ್ಪಾದಕ ಲಾಂಚ್ಪ್ಯಾಡ್ಗಳ ಮೇಲೆ ಭಾರತದ ಪಿನ್ಪಾಯಿಂಟ್ ಸ್ಟ್ರೈಕ್https://t.co/5w1CUgca2A
— Saaksha TV (@SaakshaTv) November 20, 2020